Home ಟಾಪ್ ಸುದ್ದಿಗಳು ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಪೂಜಾ ಭಟ್

ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಪೂಜಾ ಭಟ್

ಹೈದರಾಬಾದ್: ಪ್ರಸಕ್ತ ಹೈದರಾಬಾದ್ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆ 56 ದಿನಗಳ ಹೊಸ್ತಿಲಲ್ಲಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಖ್ಯಾತ ಬಾಲಿವುಡ್ ನಟಿ ಪೂಜಾ ಭಟ್ ಅವರು ಭಾಗವಹಿಸಿ ಗಮನ ಸೆಳೆದಿದ್ದಾರೆ.

ಈ ಕುರಿತ ವೀಡಿಯೋವನ್ನು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಗೆ ಎಲ್ಲರೂ ಸೇರುತ್ತಿದ್ದಾರೆ. ಈಗ ನಟಿ ಪೂಜಾ ಭಟ್ ಕೂಡ ಈ ವಿಚಾರಧಾರೆಯ ಪಾದಯಾತ್ರೆಗೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.

ನಟಿ ಪೂಜಾ ಭಟ್ ಮತ್ತು ರಾಹುಲ್ ಗಾಂಧಿ ಅವರು ಪರಸ್ಪರ ಮಾತನಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ ಬಾಲಿವುಡ್ ತಾರೆಯರ ಪಟ್ಟಿಗೆ ನಟಿ ಪೂಜಾ ಭಟ್ ಕೂಡ ಸೇರಿದ್ದಾರೆ.

ಇದಕ್ಕೂ ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಕೂಡ ಭಾರತ್ ಜೋಡೋ ಯಾತ್ರೆ ಮತ್ತು ರಾಹುಲ್ ಗಾಂಧಿ ಅವರನ್ನು ಹೊಗಳಿದ್ದರು.

Join Whatsapp
Exit mobile version