Home ಟಾಪ್ ಸುದ್ದಿಗಳು ಭಾರತ್ ಜೋಡೋ ಯಾತ್ರೆ; ರಾಹುಲ್ ಗಾಂಧಿಯ ವಸತಿ ವ್ಯವಸ್ಥೆ ಬಗ್ಗೆ ಪಕ್ಷದ ಸ್ಪಷ್ಟೀಕರಣ

ಭಾರತ್ ಜೋಡೋ ಯಾತ್ರೆ; ರಾಹುಲ್ ಗಾಂಧಿಯ ವಸತಿ ವ್ಯವಸ್ಥೆ ಬಗ್ಗೆ ಪಕ್ಷದ ಸ್ಪಷ್ಟೀಕರಣ

ಹೊಸದಿಲ್ಲಿ: ಕನ್ಯಾಕುಮಾರಿಯಿಂದ ಆರಂಭಿಸಿರುವ ‘ಭಾರತ್ ಜೋಡೋ ಯಾತ್ರೆ’ 4ನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ 1 ಶತಮಾನದಲ್ಲಿ ದೇಶದಲ್ಲಿ ನಡೆದ ಅತಿ ಉದ್ದದ ಪಾದಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಂತಿ ಮತ್ತು ಕೋಮು ಸೌಹಾರ್ದತೆಯ ಸಂದೇಶದೊಂದಿಗೆ ಕಾಂಗ್ರೆಸ್ ನಾಯಕರ ದಂಡು ಪ್ರತಿದಿನ 25 ಕಿಲೋಮೀಟರ್ ಸಂಚರಿಸಲಿದೆ.

ಪಕ್ಷವು ರಾಷ್ಟ್ರವ್ಯಾಪಿ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ರಾಹುಲ್ ಗಾಂಧಿ ಅವರ ವಸತಿ ಮತ್ತು ಪ್ರವಾಸದ ಬಗ್ಗೆ ಕೆಲವು ಸಂಬಂಧಿತ ಪ್ರಶ್ನೆಗಳು ಉದ್ಭವಿಸಿದೆ. ಆದರೆ  ಅವರು ಇಡೀ ಪ್ರಯಾಣವನ್ನು ಸರಳ ರೀತಿಯಲ್ಲಿ ಪೂರ್ಣಗೊಳಿಸಲಿದ್ದು ಯಾವುದೇ ಹೊಟೇಲ್ ಗಳಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಪಾದಯಾತ್ರೆಯ ದಿನಗಳಲ್ಲಿ ರಾಹುಲ್ ಗಾಂಧಿ ಹಾಗೂ  ಸಹ ಯಾತ್ರಿಕರು ಕಂಟೈನರ್‌ನಲ್ಲಿ ಉಳಿಯಲಿದ್ದಾರೆ. ಒಟ್ಟು 60 ಕಂಟೈನರ್ ಗಳ ವ್ಯವಸ್ಥೆ ಮಾಡಲಾಗಿದ್ದು, ಮಲಗುವ ಹಾಸಿಗೆಗಳು, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣದ ಸಮಯದಲ್ಲಿ, ತಾಪಮಾನ ಮತ್ತು ಪರಿಸರವು ಅನೇಕ ಪ್ರದೇಶಗಳಲ್ಲಿ ಭಿನ್ನವಾಗಿರುವ ಕಾರಣ  ಎಸಿಗಳನ್ನು ಸಹ ಅಳವಡಿಸಲಾಗಿದೆ.

ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಒಬ್ಬರೇ ಒಂದು ಕಂಟೈನರ್‌ನಲ್ಲಿ ಉಳಿದುಕೊಳ್ಳಲಿದ್ದು,ಇತರರು ಉಳಿದ ಕಂಟೈನರ್‌ಗಳನ್ನು ಹಂಚಿಕೊಳ್ಳುತ್ತಾರೆ. ಭಾರತ್ ಜೋಡೋ ಯಾತ್ರೆಯ ಈ 5 ತಿಂಗಳುಗಳಲ್ಲಿ ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೆ.30 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಲಿದ್ದು, 7 ಜಿಲ್ಲೆಗಳಲ್ಲಿ ಒಟ್ಟು 22 ದಿವಸ ಸಂಚರಿಸಲಿದೆ. ಯಾತ್ರೆಗೆ ಮೈಸೂರು ದಸರಾದ 4 ದಿನಗಳು ವಿಶ್ರಾಂತಿ ನೀಡಲಾಗಿದೆ.

Join Whatsapp
Exit mobile version