Home ಜಾಲತಾಣದಿಂದ ಭಾರತ್ ಜೋಡೋ: ಮೈಸೂರಿಗೆ ಸೋನಿಯಾ ಇಂದು ಆಗಮನ

ಭಾರತ್ ಜೋಡೋ: ಮೈಸೂರಿಗೆ ಸೋನಿಯಾ ಇಂದು ಆಗಮನ

ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಸ್ವಾಗತಿಸಲು ರಾಹುಲ್ ಗಾಂಧಿ ಮೈಸೂರಿಗೆ ತೆರಳಿದರು. ಭಾರತ್ ಜೋಡೋ ಯಾತ್ರೆಯ ನಾಲ್ಕನೇ ದಿನವಾದ ಇಂದು ಯಾತ್ರೆಯು ಮೈಸೂರಿನ ಆರ್.ಗೇಟ್ ನಿಂದ ಪಾಂಡವಪುರದತ್ತ ತೆರಳಿದೆ.

12.30ಕ್ಕೆ ಸೋನಿಯಾ ಗಾಂಧಿ ಮೈಸೂರು ತಲುಪಲಿದ್ದು, ತಾಯಿ-ಮಗ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 1 ಗಂಟೆಗೆ ರಾಹುಲ್ ಶ್ರೀರಂಗಪಟ್ಟಣ ತಲುಪಲಿದ್ದಾರೆ.

ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್‌ ನೆಸ್  ರೆಸಾರ್ಟ್ ನಲ್ಲಿ ಸೋನಿಯಾ ತಂಗುವ ಸಾಧ್ಯತೆ ಇದೆ.

ಅ. 6 ರಂದು ಮಂಡ್ಯದಲ್ಲಿ ಐಕ್ಯತಾ ರಾಲಿಯಲ್ಲಿ  ರಾಹುಲ್, ಸೋನಿಯಾ ಪಾಲ್ಗೊಳ್ಳಲಿದ್ದಾರೆ. ಸೋನಿಯಾ ಭೇಟಿ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಎಸ್.ಪಿ ಅಯ್ಯಪ್ಪ  ಭೇಟಿ ಪರಿಶೀಲನೆ ನಡೆಸಿದ್ದು, ರೆಸಾರ್ಟ್ ಗೆ CRPF ಪಡೆಯಿಂದ‌ ಬಿಗಿ ಭದ್ರತೆ ಒದಗಿಸಲಾಗಿದೆ.

Join Whatsapp
Exit mobile version