Home ಟಾಪ್ ಸುದ್ದಿಗಳು ಆರೆಸ್ಸೆಸ್ ಚಡ್ಡಿ ಸುಡುವ ಭಾರತ್ ಜೋಡೋ ಪೋಸ್ಟ್

ಆರೆಸ್ಸೆಸ್ ಚಡ್ಡಿ ಸುಡುವ ಭಾರತ್ ಜೋಡೋ ಪೋಸ್ಟ್

ನವದೆಹಲಿ: ಭಾರತ್ ಜೋಡೋ ಯಾತ್ರೆ ಸಂಬಂಧ ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಜಾಲ ತಾಣದಲ್ಲಿನ ಪೋಸ್ಟ್ ನಲ್ಲಿ ಆರಸ್ಸೆಸ್ ನ ಕಾಲೆಳೆಯುವ ಕೆಲಸ ಮಾಡಿದ್ದು ಅದರಲ್ಲಿ ಆರೆಸ್ಸೆಸ್ ನ ಕಾಕಿ ಚಡ್ಡಿಗಳು ಬೆಂಕಿಯಲ್ಲಿ ಉರಿಯುವುದನ್ನು ತೋರಿಸಲಾಗಿದೆ.


ಅದರ ಕೆಳಗೆ ‘ಭಾರತವನ್ನು ಬಿಜೆಪಿ ಮತ್ತು ಆರೆಸ್ಸೆಸ್ಸಿನ ದೇಶ ಭಂಜಕ ಸಂಕೋಲೆಗಳಿಂದ ಬಿಡುಗಡೆಗೊಳಿಸಿ’ ಎಂಬ ಬರಹವನ್ನು ಹಾಕಲಾಗಿದೆ
ಟ್ವಿಟರ್ ನಲ್ಲೂ ಕಾಂಗ್ರೆಸ್ ಇದೇ ಪೋಸ್ಟ್ ಹಾಕಿದ್ದು, ದೇಶವು ಆರೆಸ್ಸೆಸ್, ಬಿಜೆಪಿಯವರ ದ್ವೇಷದಿಂದ ನಾಶವಾಗುವುದಕ್ಕೆ ಮೊದಲು ಅದರ ಸರಪಳಿಗಳಿಂದ ಬಿಡಿಸಿಕೊಳ್ಳಿ ಎಂಬ ವಾಕ್ಯವನ್ನು ಹರಿಬಿಡಲಾಗಿದೆ.
ಬಲಯುತವಾದ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಆಧಾರ ಸ್ತಂಭವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.


ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿಯೂ ಅವರು ಇದೇ ವಿಷಯವನ್ನು ಪ್ರಸ್ತಾಪಿಸಿದರು. ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಹೊಸ ಆಯಾಮವನ್ನು ತಂದಿದೆ. ಬಿಜೆಪಿಯು ಜನರ ಜವಾಬ್ದಾರಿಯಿಂದ ಜಾರಿಕೊಳ್ಳುವುದನ್ನು ಕಾಂಗ್ರೆಸ್ ಜನರಿಗೆ ತಿಳಿ ಹೇಳುತ್ತಿದೆ ಎಂದೂ ಅವರು ಹೇಳಿದರು.
ಭಾರತ್ ಜೋಡೋ ಯಾತ್ರೆಯು ಮುಖ್ಯ ಉದ್ದೇಶ ಬರೇ ಕಾಂಗ್ರೆಸ್ಸನ್ನು ಮಾತ್ರ ಬಲಪಡಿಸುವುದಲ್ಲ; ವಿರೋಧ ಪಕ್ಷಗಳ ಒಗ್ಗಟ್ಟನ್ನು ಬಲಪಡಿಸುವುದಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.


“ನನಗೆ ಸಂತೋಷವಾಗಿದೆ, ಭಾರತ್ ಜೋಡೋ ಯಾತ್ರೆ ಮೂಲಕ ಆನೆ ಎಚ್ಚೆತ್ತು ಮುನ್ನುಗ್ಗುತ್ತಿದೆ. ಎಲ್ಲ ಪಕ್ಷಗಳು ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದನ್ನು ಗಮನಿಸುತ್ತಿವೆ” ಎಂದು ಸಹ ಅವರು ಹೇಳಿದರು.


Join Whatsapp
Exit mobile version