Home ಟಾಪ್ ಸುದ್ದಿಗಳು ‘ಭಾರತ್ ಜೋಡೋ ನ್ಯಾಯ’ ಯಾತ್ರೆಗೆ 5 ದಿನಗಳ ಕಾಲ ವಿರಾಮ

‘ಭಾರತ್ ಜೋಡೋ ನ್ಯಾಯ’ ಯಾತ್ರೆಗೆ 5 ದಿನಗಳ ಕಾಲ ವಿರಾಮ

ನವದೆಹಲಿ: ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ ಐದು ದಿನ ಭಾರತ್ ಜೋಡೊ ನ್ಯಾಯ ಯಾತ್ರೆಗೆ ವಿರಾಮ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಬುಧವಾರ ತಿಳಿಸಿದೆ.


ಫೆಬ್ರವರಿ 27 ಮತ್ತು 28 ರಂದು ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದು, ಅಲ್ಲಿ ಎರಡು ಉಪನ್ಯಾಸಗಳನ್ನು ನೀಡಲಿದ್ದಾರೆ. ಜತೆಗೆ ನವದೆಹಲಿಯಲ್ಲಿ ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ ಮಾರ್ಚ್ 2 ರಿಂದ ನಾವು ಪ್ರಯಾಣವನ್ನು ಪುನರಾರಂಭಿಸುತ್ತೇವೆ ಮತ್ತು ರಾಹುಲ್ ಗಾಂಧಿ ಮಾರ್ಚ್ 5 ರಂದು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಪ್ರಸ್ತುತ ಯುಪಿಯಲ್ಲಿದೆ. ಇಂದು ಪ್ರಯಾಣದ 39ನೇ ದಿನ. ಮಂಗಳವಾರ ರಾತ್ರಿ ರಾಹುಲ್ ಅವರ ನ್ಯಾಯ ಯಾತ್ರೆ ಲಕ್ನೋ ತಲುಪಿದೆ. ಅದೇ ಸಮಯದಲ್ಲಿ, ಇಂದು ಯಾತ್ರೆ ಕಾನ್ಪುರವನ್ನು ತಲುಪಲಿದೆ.

Join Whatsapp
Exit mobile version