Home ಟಾಪ್ ಸುದ್ದಿಗಳು ‘ಭಾರತ್ ಜೋಡೋ’ ಅಂತಾ ಪಾದಯಾತ್ರೆ ಮಾಡುವವರು ಈಗ ಯಾಕೆ ಭಾರತ್​​ ಹೆಸರನ್ನು ವಿರೋಧಿಸುತ್ತಿದ್ದಾರೆ: ಜೆ.ಪಿ. ನಡ್ಡಾ

‘ಭಾರತ್ ಜೋಡೋ’ ಅಂತಾ ಪಾದಯಾತ್ರೆ ಮಾಡುವವರು ಈಗ ಯಾಕೆ ಭಾರತ್​​ ಹೆಸರನ್ನು ವಿರೋಧಿಸುತ್ತಿದ್ದಾರೆ: ಜೆ.ಪಿ. ನಡ್ಡಾ

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟಕ್ಕೆ BJP ಹೆದರಿದೆ. ಹೆಸರು ಬದಲಿಸುವ ಅವಶ್ಯಕತೆ ಏನಿದೆ ಎಂದು ಆಡಳಿತಾರೂಢ ಕೇಂದ್ರ ಸರ್ಕಾರವನ್ನು ವಿಪಕ್ಷಗಳು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಭಾರತ್​ ಜೋಡೋ ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡುತ್ತೀರಿ, ಆದರೆ ಈಗ ಯಾಕೆ ಭಾರತ್​​ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಜಿ20 ಶೃಂಗಸಭೆಯ ನಿಮಿತ್ತ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಸಾಂಪ್ರದಾಯಿಕವಾಗಿ ಬರೆಯಲಾಗುವ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ” ಬದಲು “ಪ್ರೆಸಿಡೆಂಟ್‌ ಆಫ್‌ ಭಾರತ್”‌ ಬರೆಯಲಾಗಿದೆ ಎಂಬ ವಿಚಾರದ ಕುರಿತಂತೆ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

Join Whatsapp
Exit mobile version