Home ಟಾಪ್ ಸುದ್ದಿಗಳು ಅಗ್ನಿಪಥ್‌ ವಿರೋಧಿಸಿ ಇಂದು ಭಾರತ್‌ ಬಂದ್‌: 35 ವಾಟ್ಸಾಪ್‌ ಗ್ರೂಪ್‌ ನಿಷೇಧ

ಅಗ್ನಿಪಥ್‌ ವಿರೋಧಿಸಿ ಇಂದು ಭಾರತ್‌ ಬಂದ್‌: 35 ವಾಟ್ಸಾಪ್‌ ಗ್ರೂಪ್‌ ನಿಷೇಧ

ನವದೆಹಲಿ: ತೀವ್ರ ವಿರೋಧದ ನಡುವೆ ಅಗ್ನಿಪಥ್ ಯೋಜನೆಯನ್ನು ಜಾರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಭಾರತ್ ಬಂದ್‍ ಗೆ ಕರೆ ನೀಡಲಾಗಿದೆ.

ಬಿಹಾರ ರಾಜ್ಯದಿಂದ ಭಾರತ್ ಬಂದ್ ಘೋಷಣೆಯಾಗಿದ್ದು, ಇದಕ್ಕೆ ಇತರೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ. ಹೀಗಾಗಿ ಉತ್ತರದ ಕೆಲ ರಾಜ್ಯ ಬಿಟ್ಟರೇ ಇತರೆ ರಾಜ್ಯಗಳಲ್ಲಿ ಭಾರತ್ ಬಂದ್ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಬಿಹಾರದಲ್ಲಿ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಜಾರ್ಖಂಡ್‍ ನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

35 ವಾಟ್ಸಾಪ್ ಗ್ರೂಪ್ ನಿಷೇಧ: ಅಗ್ನಿಪಥ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದ ಆರೋಪದ ಮೇರೆಗೆ 35 ವಾಟ್ಸಪ್ ಗ್ರೂಪ್‍ ಗಳ ವಿರುದ್ದ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದ್ದು, 35 ಗ್ರೂಪ್‍ ಗಳನ್ನು ನಿಷೇಧಿಸಿದೆ.

Join Whatsapp
Exit mobile version