ಇಂಧನ ಬೆಲೆ ಏರಿಕೆ, ಜಿಎಸ್ಟಿ ನೀತಿ ಖಂಡಿಸಿ ವಿವಿಧ ಸಂಘಟನೆಗಳಿಂದ ನಾಳೆ ಭಾರತ ಬಂದ್ ಗೆ ಕರೆ

Prasthutha|

ನವದೆಹಲಿ : ಜಿಎಸ್ ಟಿ ನಿಯಮಗಳನ್ನು ಪುನರ್ ಪರಿಶೀಲನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಸಂಘಟನೆಗಳು ನಾಳೆ ಭಾರತ ಬಂದ್ ಗೆ ಕರೆ ನೀಡಿವೆ. ಜಿಎಸ್ ಟಿ ನಿಯಮಗಳನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಅಖಿಲ ಭಾರತ ವರ್ತಕರ ಸಂಘ ಬಂದ್ ಗೆ ಕರೆ ನೀಡಿದೆ. ದೇಶಾದ್ಯಂತದ ಸುಮಾರು 40,000 ವರ್ತಕರು ಬಂದ್ ಗೆ ಬೆಂಬಲ ನೀಡಲಿದ್ದಾರೆ ಎಂದು ಸಂಘಟನೆ ಘೋಷಿಸಿದೆ.

- Advertisement -

ಅಖಿಲ ಭಾರತ ಸಾಗಾಟಗಾರರ ಅಭಿವೃದ್ಧಿ ಸಂಘ ಕೂಡ ಬಂದ್ ಗೆ ಬೆಂಬಲ ಘೋಷಿಸಿದೆ. ಇ-ವೇ ಬಿಲ್ ಅನ್ನು ಇ-ಇನ್ ವಾಯ್ಸ್ ಗೆ ಬದಲಾಯಿಸುವಂತೆ ಮತ್ತು ತಕ್ಷಣವೇ ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ನಾಳೆ ಲಕ್ಷಾಂತರ ಟ್ರಕ್ ಗಳು ಬೀದಿಗಿಳಿಯದೆ ಪ್ರತಿಭಟನೆ ನಡೆಸಲಿವೆ.

ಅಖಿಲ ಭಾರತ ಎಫ್ ಎಂಸಿಜಿ ವಿತರಕರ ಸಂಘ, ಅಲ್ಯುಮ್ಯೂನಿಯಂ ಪಾತ್ರೆಗಳ ಉತ್ಪಾದಕರ ಸಂಘ, ಕಾಸ್ಮೆಟಿಕ್ ಉತ್ಪಾದಕರ ಸಂಘ, ಮಹಿಳಾ ಉದ್ಯಮಿಗಳ ಸಂಘ, ಕಂಪ್ಯೂಟರ್ ಡೀಲರ್ ಗಳ ಸಂಘ ಮುಂತಾದ ವಿವಿಧ ರಾಷ್ಟ್ರೀಯ ಮಟ್ಟದ ಸಂಘಟನೆಗಳು ಬಂದ್ ಗೆ ಬೆಂಬ ಸೂಚಿಸಿವೆ.

Join Whatsapp