ಭದ್ರಾವತಿ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ: ಅಸಲಿ ಕಾರಣ ಬಹಿರಂಗ

Prasthutha|

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಬಜರಂಗದಳ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಅಂದರ್ ಬಾಹರ್ ಇಸ್ಪೀಟ್ ಆಟದ ಸಂದರ್ಭದಲ್ಲಿ ನಡೆದ ಗಲಾಟೆ ಇದಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.


ಸೋಮವಾರ ಭದ್ರಾವತಿಯಲ್ಲಿ ಸುನೀಲ್ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದರು. ಈ ವೇಳೆ ಮುಬಾರಕ್ ಎಂಬಾತ ವೀಡಿಯೋ ಮಾಡಿಕೊಂಡಿದ್ದರು. ವೀಡಿಯೋ ಮಾಡಿದ್ದರಿಂದ ಇಬ್ಬರ ನಡುವೆ ಕಿರಿಕ್ ಕೂಡ ನಡೆಯುತ್ತದೆ. ಬಳಿಕ ಸುನಿಲ್ ಮುಬಾರಕ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದರ ಪ್ರತೀಕಾರವಾಗಿ ಮುಬಾರಕ್ ಕೂಡ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -


ಆದರೆ ಸುನೀಲ್ ಪೊಲೀಸರ ಮುಂದೆ ತಪ್ಪಿಸಿಕೊಳ್ಳಲು ಸುಳ್ಳಿನ ಕತೆ ಕಟ್ಟಿದ್ದು, ಕೋಮು ಭಾವನೆ ಕೆರಳುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದು, ಮತೀಯ ದ್ವೇಷದಿಂದ ಚಾಕು ಇರಿತವಾಗಿದೆ ಎಂದು ಹೇಳಿದೆ.

- Advertisement -