Home ಟಾಪ್ ಸುದ್ದಿಗಳು ಶಿಕ್ಷಣ ಸಚಿವ ನಾಗೇಶ್ ನಿವಾಸಕ್ಕೆ NSUI ಕಾರ್ಯಕರ್ತರಿಂದ ಮುತ್ತಿಗೆ | 15 ಮಂದಿ ವಶಕ್ಕೆ: ಆರಗ...

ಶಿಕ್ಷಣ ಸಚಿವ ನಾಗೇಶ್ ನಿವಾಸಕ್ಕೆ NSUI ಕಾರ್ಯಕರ್ತರಿಂದ ಮುತ್ತಿಗೆ | 15 ಮಂದಿ ವಶಕ್ಕೆ: ಆರಗ ಜ್ಞಾನೇಂದ್ರ

ತುಮಕೂರು: ಶಿಕ್ಷಣ ಸಚಿವ ನಾಗೇಶ್ ಅವರ ನಿವಾಸದ ಮೇಲೆ NSUI ಕಾರ್ಯಕರ್ತರು ಮುತ್ತಿಗೆ ಹಾಕಿ ದಾಳಿ ಪ್ರಯತ್ನ ನಡೆಸಿದ ಘಟನೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಎರಡು ವಾಹನ ಗಳಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ತಿಪಟೂರಿನ ಸಚಿವರ ನಿವಾಸ ದ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಇದುವರೆಗೆ NSUI ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಒಳಗೊಂಡಂತೆ ಒಟ್ಟು 15 ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಗಳು ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದು ಓರ್ವ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ.

ನೆಲೆ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಇಂಥ ನೀಚ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದು, ನಾಡಿನ ಜನತೆ ಕ್ಷುಲ್ಲಕ ಹಾಗೂ ಗೂಂಡಾ ರಾಜಕಾರಣವನ್ನು ಸಹಿಸುವುದಿಲ್ಲ ಎಂದಿದ್ದಾರೆ. ತಿಪಟೂರಿನ ಸಚಿವರ ನಿವಾಸಕ್ಕೆ ಭೇಟಿ ನೀಡುವುದಾಗಿಯೂ ಸಚಿವರು ತಿಳಿಸಿದರು.

Join Whatsapp
Exit mobile version