Home ಕರಾವಳಿ ರಾಷ್ಟ್ರೀಯ ಗೇಮ್ಸ್ ನಲ್ಲಿ ಚಿನ್ನ ಸಹಿತ ಐದು ಪದಕ ಗೆದ್ದ ಬೆಂಗ್ರೆ ಆನಂದ್ ಅಮೀನ್

ರಾಷ್ಟ್ರೀಯ ಗೇಮ್ಸ್ ನಲ್ಲಿ ಚಿನ್ನ ಸಹಿತ ಐದು ಪದಕ ಗೆದ್ದ ಬೆಂಗ್ರೆ ಆನಂದ್ ಅಮೀನ್

ಮಂಗಳೂರು: ಕೇರಳದ ತಿರುವನಂತಪುರದಲ್ಲಿ ಮೇ 18ರಿಂದ 22ರ ತನಕ ನಡೆದ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯ ಆಯೋಜಿಸಿದ 4ನೇ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ನ ಈಜು ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಬೆಂಗ್ರೆ ಆನಂದ ಅಮೀನ್ ಅವರು ಒಂದು ಚಿನ್ನ, ಎರಡು ಬೆಳ್ಳಿ ಸಹಿತ ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಕುಸ್ತಿ ಪಟು ಕೂಡ ಆಗಿರುವ ಆನಂದ್ ಅಮೀನ್ ಅವರು ನಿರಂತರವಾಗಿ ಈಜು ಕೂಟಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಮೀನ್ ಅವರು ಕೆನರಾ ಬ್ಯಾಂಕಿನ ಮಂಗಳೂರಿನ ಬಂದರು ಶಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಅಮೀನ್ ಅವರು ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ನಲ್ಲಿ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಚಿನ್ನ, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗ ಮತ್ತು 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಹಾಗೂ 4X50 ಮೀಟರ್ ಮಿಡ್ಲೆ ರಿಲೇ ಮತ್ತು 4X50 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

Join Whatsapp
Exit mobile version