ಬೆಂಗಳೂರು | ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿ ವೀಡಿಯೋ ರೆಕಾರ್ಡ್: ನಾಗೇಶ್ ಬಂಧನ

- Advertisement -

ಬೆಂಗಳೂರು: ರಹಸ್ಯವಾಗಿ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಟೆಕ್ಕಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಆಂಧ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಟೆಕ್ಕಿ.

ಆರೋಪಿಯು ಕಂಪನಿಯ ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರಹಸ್ಯವಾಗಿ ಮೊಬೈಲ್‌ನಲ್ಲಿ ಮಹಿಳೆಯ ವೀಡಿಯೋ ಮಾಡುತ್ತಿದ್ದು, ಅದರ ಪ್ರತಿಬಿಂಬ ಎದುರುಗಡೆಯ ಬಾಗಿಲು ಮೇಲೆ ಕಾಣಿಸಿತ್ತು. ಇದನ್ನು ಕಂಡ ಮಹಿಳೆ ಕೂಡಲೇ ಹೊರಬಂದು ನೋಡಿದಾಗ ಇನ್ನೋರ್ವ ಮಹಿಳಾ ಸಿಬ್ಬಂದಿ ಮಾತ್ರ ಕಾಣಿಸಿದ್ದರು.

- Advertisement -

ಬಳಿಕ ಶೌಚಾಲಯದ ಒಳ ಹೋಗಿ ಪರಿಶೀಲಿಸಿದಾಗ ಆರೋಪಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಈ ವೇಳೆ ಮಹಿಳೆಯು ಕಿರುಚಾಡಿದಾಗ ಆರೋಪಿಯು ಕ್ಷಮೆಯಾಚಿಸಿದ್ದ. ಬಳಿಕ ಕಂಪನಿಯ ಹೆಚ್.ಆರ್ ಸಿಬ್ಬಂದಿ ಆರೋಪಿಯ ಮೊಬೈಲ್ ಪರಿಶೀಲನೆ ಮಾಡಿದಾಗ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಪತ್ತೆಯಾಗಿತ್ತು.

ಇಷ್ಟಾದರೂ ಕಂಪನಿಯ ಆಡಳಿತ ಮಂಡಳಿಯು ಆರೋಪಿಯಿಂದ ಕ್ಷಮೆ ಕೇಳಿಸಿ ಸುಮ್ಮನಾಗಿತ್ತು. ಈ ವಿಚಾರ ತಿಳಿದ ಮಹಿಳಾ ಉದ್ಯೋಗಿಯ ಪತಿ, ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿ, ಗಲಾಟೆ ಮಾಡಿದ್ದರು. ಅಲ್ಲದೇ ಮಂಗಳವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಪೊಲೀಸರು ದೂರನ್ನಾಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -


Must Read

Related Articles