Home ಟಾಪ್ ಸುದ್ದಿಗಳು ಬೆಂಗಳೂರು ಜನರಿಗೆ ಶಾಕ್‌: ಜುಲೈ 1 ರಿಂದ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು ಜನರಿಗೆ ಶಾಕ್‌: ಜುಲೈ 1 ರಿಂದ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಹೋಗುವ ಟೋಲ್ ರಸ್ತೆ ಶುಲ್ಕ ಜುಲೈ ೧ ರಿಂದ ಏರಿಕೆಯಾಗಲಿದೆ. ಶೇ. 20 ರಷ್ಟು ಟೋಲ್‌ ಶುಲ್ಕ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಎನ್‌ ಎಚ್‌ ಎಐಗೆ ಎಲಿವೇಟೆಡ್‌ ಟೋಲ್‌ ವೇ ಕಂಪನಿ ಶುಲ್ಕ ದರ ಹೆಚ್ಚಿಸುವಂತೆ ಮನವಿ ಸಲ್ಲಿಸಿತ್ತು. ಈ ಮನವಿಗೆ ಎನ್‍ಎಚ್‍ಎಐ ಗ್ರೀನ್ ಸಿಗ್ನಲ್ ನೀಡಿದೆ. ಪರಿಷ್ಕೃತ ಟೋಲ್ ಶುಲ್ಕ ಜುಲೈ 1 ರಿಂದ ಜಾರಿಗೆ ಬರಲಿದೆ. ಒಪ್ಪಂದದ ಪ್ರಕಾರ ರಸ್ತೆ ಬಳಕೆ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‍ವೇ ಕಂಪನಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ನಿತ್ಯವೂ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಕೊರೊನಾ ಬಳಿಕ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಇಂಥ ಸಂದರ್ಭದಲ್ಲಿ ಏಕಾಏಕಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

Join Whatsapp
Exit mobile version