Home ಟಾಪ್ ಸುದ್ದಿಗಳು ವಿಶ್ವದ ಟಾಪ್ 100 ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದ ಬೆಂಗಳೂರು

ವಿಶ್ವದ ಟಾಪ್ 100 ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದ ಬೆಂಗಳೂರು

ದೆಹಲಿ: ಯಾವುದೇ ದೇಶದಿಂದ ಬಂದಿಳಿಯುವ ಪ್ರಯಾಣಿಕರು ಮೊದಲ ಹೆಜ್ಜೆ ಇಡುವ ವಿಮಾನ ನಿಲ್ದಾಣ ಹೇಗಿದೆ ಎಂಬುದು ಆಯಾ ದೇಶದ ಗೌರವದ ಪ್ರಶ್ನೆಯಾಗಿದೆ. ಪ್ರತಿಯೊಂದು ದೇಶದಲ್ಲಿಯೂ ಈ ಬಗ್ಗೆ ಆಲೋಚನೆ, ಸುಧಾರಣೆ ನಿರಂತರ ನಡೆಯುತ್ತದೆ. ಯಾವುದೇ ದೇಶ ಜಾಗತಿ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಿಮಾನ ನಿಲ್ದಾಣಗಳ ಪಾತ್ರವೂ ಇದೆ.


ಇತ್ತೀಚಿಗೆ ಸ್ಕೈಟ್ರಾಕ್ಸ್‌ ಎಂಬ ಸಂಸ್ಥೆ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2022 ಪಟ್ಟಿಯನ್ನು ಬಿಡುಗೊಳಿಸಿದ್ದು, ವಿಶ್ವದ ಅತ್ಯುತ್ತಮ 100 ವಿಮಾನ ನಿಲ್ದಾಣವಗಳನ್ನು ಹೆಸರಿಸಿದೆ. ಅದರಲ್ಲಿ ಭಾರತದ ನಾಲ್ಕು ಭಾರತೀಯ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ. ಈ ನಾಲ್ಕು ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ.

Join Whatsapp
Exit mobile version