ಬೆಂಗಳೂರು:ವತಮಿಳುನಾಡು ಮೂಲದ ಬಿ ಟೆಕ್ ವಿದ್ಯಾರ್ಥಿಯೊಬ್ಬ ಸುಟ್ಟ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ತೆಲಗರ ಹಳ್ಳಿ ಬಳಿಯ ನೀಲಗಿರಿ ತೋಪಿನ ಬಳಿ ನಡೆದಿದೆ ಎಂದು ತಿಳಿದುಬಂದಿದೆ.
ಇದು ಆತ್ಮಹತ್ಯೆಯ ಕೊಲೆಯೋ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಆನೇಕಲ್ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷಿತ್ ಮೃತ ವಿದ್ಯಾರ್ಥಿ. ತಮಿಳುನಾಡಿನ ಗುಮ್ಮಳಾಪುರದ ಹಾಸ್ಟೇಲ್ ನಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ ಹರ್ಷಿತ್ ಫೆ.21ರಿಂದ ಕಾಣೆಯಾಗಿದ್ದ.
ಬಿ.ಟೆಕ್ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ತಮಿಳುನಾಡಿನ ತಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆನೇಕಲ್ ಬಳಿಯ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿ ಶವ ಸುಟ್ಟುಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದನ್ನು ಗಮನಿಸಿದ ಸ್ಥಳೀಯರು ಆನೇಕಲ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ವೇಳೆ ಮೃತದೇಹದ ಬಳಿ ವಿದ್ಯಾರ್ಥಿಯ ಬ್ಯಾಗ್, ದಾಖಲೆಗಳು ಕಂಡುಬಂದಿವೆ.
ಇದನ್ನು ಪರಿಶೀಲಿಸಿದಾಗ ಈತ ಗುಮ್ಮಳಾಪುರ ಹಾಸ್ಟೇಲ್ ನಿಂದ ಕಾಣೆಯಾಗಿದ್ದ ಬಿ.ಟೆಕ್ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.