Home ಟಾಪ್ ಸುದ್ದಿಗಳು ಬೆಂಗಳೂರು, ಉತ್ತರ ಭಾರತದಲ್ಲಿ ಗುರುವಾರ ಈದ್ ಉಲ್ ಫಿತರ್

ಬೆಂಗಳೂರು, ಉತ್ತರ ಭಾರತದಲ್ಲಿ ಗುರುವಾರ ಈದ್ ಉಲ್ ಫಿತರ್

ಬೆಂಗಳೂರು, ಉತ್ತರ ಭಾರತ ಮತ್ತು ದೇಶದ ಬಹುತೇಕ ಕಡೆ ಗುರುವಾರ ಈದ್ ಆಚರಿಸಲಾಗುತ್ತಿದೆ.

ದೆಹಲಿಯ ಜಾಮಾ ಮಸೀದಿ ಮತ್ತು ಫತೇಪುರಿ ಮಸೀದಿಯ ಇಮಾಮ್‌ಗಳು ಚಂದ್ರನ ದರ್ಶನವಾಗದ ಕಾರಣ ಈದ್ ಅನ್ನು ಗುರುವಾರ ಆಚರಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ಈದುಲ್ ಫಿತರ್ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿ ಸಂಚಾಲಕ ಮೌಲಾನ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಭಾಗದಲ್ಲಿಯೂ ಕೂಡ ಗುರುವಾರ ಈದುಲ್ ಫಿತ್‌ರ್ ಆಚರಿಸಲಾಗುತ್ತಿದೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ಎ.ಎಮ್ ಹಿಂಡಸಗೇರಿ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೇರಳದ ಮತ್ತು ಕರ್ನಾಟಕದ ಕರಾವಳಿ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಏಪ್ರಿಲ್‌ 10ರಂದು ಬುಧವಾರ ಈದ್‌ ಆಚರಣೆ ಮಾಡುವುದಾಗಿ ಘೋಷಿಸಲಾಗಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಬಿಹಾರದಗಳಲ್ಕೂ ಚಂದ್ರದರ್ಶನವಾದ ಯಾವುದೇ ಮಾಹಿತಿ ದೊರಕಿಲ್ಲ

Join Whatsapp
Exit mobile version