ಬೆಂಗಳೂರು: ಲಂಡನ್ ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಬೆಂಗಳೂರು ಮೂಲದ ವಿಹಾನ್ ತಾಳ್ಯ ವಿಕಾಸ್ ಗೆ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
ಕರ್ನಾಟಕದ ನಲ್ಲೂರಿನ ಪಾರಂಪರಿಕ ಹುಣಸೆ ತೋಪಿನ ಬಳಿಯ ಪುರಾತನ ದೇವಸ್ಥಾನದ ಗೋಡೆ ಮೇಲೆ ಮರದ ಕಾಂಡದ ಜೇಡವು ತನ್ನ ಬೇಟೆ ತಪ್ಪಿಸಿಕೊಳ್ಳದಂತೆ ತಡೆಯುವ ಚಿತ್ರವನ್ನು ಸೆರೆ ಹಿಡಿದಿದ್ದ. ಹಾಗೇ ಕೃಷ್ಣನ ಕೆತ್ತನೆಯಿರುವ ಕಲ್ಲಿನ ಫೋಟೋ ಕ್ಲಿಕ್ಕಿಸಿದ್ದ. ಬಳಿಕ ಅದನ್ನು ವಿಹಾನ್ ತಾಳ್ಯ ವಿಕಾಸ್ ಲಂಡನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನಕ್ಕೆ ಕಳುಹಿಸಿದ್ದರು. ಇದೀಗ ಆ ಛಾಯಾಚಿತ್ರಕ್ಕೆ 10 ವರ್ಷದೊಳಗಿನ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.