ಬೆಂಗಳೂರು ಬಂದ್: ಪ್ರತಿಭಟನೆ ಹೆಸರಲ್ಲಿ ಹೋಟೆಲ್ ಗೆ ನುಗ್ಗಿ ದಾಂಧಲೆ

Prasthutha|

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಇಂದು(ಸೆ.26) ಪ್ರತಿಭಟನೆ ನಡೆಯುತ್ತಿದೆ. ಅದರಂತೆ ಇದೀಗ ಪ್ರತಿಭಟನೆ ಹೆಸರಿನಲ್ಲಿ ಹೋಟೆಲ್ ಗೆ ನುಗ್ಗಿ ದಾಂಧಲೆ ಓರ್ವ ವ್ಯಕ್ತಿ ಧಾಂದಲೆ ಮಾಡಿದ್ದಾನೆ. ಬಂದ್ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಜಯನಗರದಲ್ಲಿರುವ ಉಡುಪಿ ಹಬ್ ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿದೆ.

- Advertisement -


ಬೈಕ್ ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಅವರ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಇದೀಗ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.