ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿಯುತ್ತಿದ್ದು, ರೌಡಿ ಓರ್ವ ಕೈಯಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆಗೆ ಅವಾಜ್ ಹಾಕಿದ್ದಾನೆ.
ಮಹದೇವಪುರದ ಪಣತ್ತೂರು ದಿನ್ನೆಯಲ್ಲಿ ರೌಡಿಶೀಟರ್ ಮುತ್ತು ಎಂಬಾತ ಪ್ರತಿನಿತ್ಯ ಕುಡಿದು ಅಕ್ಕಪಕ್ಕದ ಮನೆಗಳಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದ. ಪೊಲೀಸರೂ ಮೌನ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಮದ್ಯಾಹ್ನವೇ ಇಸ್ಪೀಟ್ ಮತ್ತು ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಪ್ರಶ್ನಿಸಿದಕ್ಕೆ ಎದುರು ಮನೆ ಮಹಿಳೆಗೆ ಅವಾಜ್ ಹಾಕಿದ್ದಾನೆ.
ಲಾಂಗ್ ಹಿಡಿದು ಮಹಿಳೆಗೆ ಅವಾಜ್ ಹಾಕುತ್ತಿರುವ ವಿಡೀಯೋ ವೈರಲ್ ಆಗಿದ್ದು, ವಿಡೀಯೋ ವೈರಲ್ ಆದ್ರೂ ಕಂಡು ಕಾಣದಂತೆ ವರ್ತೂರು ಪೊಲೀಸರು ವರ್ತಿಸುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.