Home ಟಾಪ್ ಸುದ್ದಿಗಳು ಬುದ್ಧದೇವ್ ಭಟ್ಟಾಚಾರ್ಯ ಬೆನ್ನಿಗೇ ಬಂಗಾಳಿ ಹಿರಿಯ ಗಾಯಕಿಯಿಂದ ‘ಪದ್ಮಶ್ರೀ’ ನಿರಾಕರಣೆ!

ಬುದ್ಧದೇವ್ ಭಟ್ಟಾಚಾರ್ಯ ಬೆನ್ನಿಗೇ ಬಂಗಾಳಿ ಹಿರಿಯ ಗಾಯಕಿಯಿಂದ ‘ಪದ್ಮಶ್ರೀ’ ನಿರಾಕರಣೆ!

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯುನಿಷ್ಟ್‌ ನಾಯಕ ಬುದ್ಧದೇವ್‌ ಭಟ್ಟಾಚಾರ್ಯ ‘ಪದ್ಮ ಭೂಷಣ’ ಪ್ರಶಸ್ತಿಯನ್ನು ನಿರಾಕರಿಸಿದ ಬೆನ್ನಿಗೆ ಬಂಗಾಳದ ಹಿರಿಯ ಗಾಯಕಿ ಕೂಡಾ ‘ಪದ್ಮಶ್ರೀ’ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಸುಮಾರು 8 ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಸಂಧ್ಯಾ ಮುಖರ್ಜಿ(90) ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

 “ತನಗಿಂತಲೂ ಕಿರಿಯ ಕಲಾವಿದರಿಗೆ ಇಂತಹಾ ಪ್ರಶಸ್ತಿ ನೀಡುವುದು ಸೂಕ್ತ” ಎಂದು ಅವರು ತಿಳಿಸಿದ್ದಾರೆ.

ಗಣರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಪದ್ಮಶ್ರೀ ಎಂದು ಹೆಸರಿಸಲು ಒಪ್ಪಿಗೆ ಕೋರಿ ದೆಹಲಿಯಿಂದ ಕರೆ ಮಾಡಿದ್ದ ಅಧಿಕಾರಿಗಳಿಗೆ, “ನಾನು ಪದ್ಮಶ್ರೀ ಪುರಸ್ಕೃತೆ ಎಂದು ಕರೆಯುವುದನ್ನು ಇಚ್ಛಿಸುವುದಿಲ್ಲ” ಎಂದು ತಾಯಿ ಹೇಳಿದ್ದಾಗಿ ಅವರ ಪುತ್ರಿ ಸೌಮಿ ಸೆಂಗುಪ್ತಾ ತಿಳಿಸಿದ್ದಾರೆ.

Join Whatsapp
Exit mobile version