Home ಟಾಪ್ ಸುದ್ದಿಗಳು ಪ.ಬಂಗಾಳ: ಶಾಜಹಾನ್ ಬಂಧಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಪ.ಬಂಗಾಳ: ಶಾಜಹಾನ್ ಬಂಧಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಕೋಲ್ಕತಾ: ಪಡಿತರ ಹಗರಣ, ಭೂಕಬಳಿಕೆ ಹಾಗೂ ಸಂದೇಶ್‌ಖಾಲಿಯಲ್ಲಿ ಮಹಿಳೆಯುರ ಕಿರುಕುಳ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶೇಖ್‌ ಶಾಹಜಾನ್‌ ಅವರನ್ನು ಬಂಧಿಸುವಂತೆ ಪ.ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿದೆ.

ಶೇಖ್ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಶಿವಜ್ಞಾನಂ ಅವರ ಪೀಠ, ನಾವು ಶೇಖ್‌ ವಿರುದ್ಧದ ಬಂಗಾಳ ಪೊಲೀಸ್‌-ಸಿಬಿಐ ಜಂಟಿ ತನಿಖೆಗೆ ತಡೆ ನೀಡಿದ್ದೆವು. ಆದರೆ ಈಗಿನ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ನಾವು ಯಾವುದೇ ತಡೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು ಹಾಗೂ ವಿಚಾರಣೆಯನ್ನು ಮಾ.4ಕ್ಕೆ ಮುಂದೂಡಿದರು.

Join Whatsapp
Exit mobile version