‘ಇದನ್ನು ಈ ಹಿಂದೆಯೇ ನಾವು ಉದ್ಘಾಟಿಸಿದ್ದೇವೆ’: ಮೋದಿ ಉದ್ಘಾಟಿಸಬೇಕಿದ್ದ ಸಮಾರಂಭದಲ್ಲಿ ಮಮತಾ ಹೇಳಿಕೆ

Prasthutha|

ಕೋಲ್ಕತ್ತಾ: ರಾಜ್ಯ ಸರ್ಕಾರಗಳು ರೂಪಿಸಿದ ಮತ್ತು ಜಾರಿಗೊಳಿಸಿದ ಹಲವಾರು ಯೋಜನೆಗಳ ಕ್ರೆಡಿಟ್ ಕೇಂದ್ರವು ಪಡೆಯುತ್ತಿದೆ ಎಂಬ ಪ್ರತಿಪಕ್ಷಗಳ ವಾದವನ್ನು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎತ್ತಿ ಹಿಡಿದಿದ್ದಾರೆ.

- Advertisement -


ಈ ಯೋಜನೆಯನ್ನು ಈ ಹಿಂದೆಯೇ ಬಂಗಾಳ ಸರ್ಕಾರ ಉದ್ಘಾಟಿಸಿದೆ ಎಂದು ಪ್ರಧಾನಿ ಮೋದಿ ಆನ್ಲೈನ್ ಮೂಲಕ ಉದ್ಘಾಟಿಸಬೇಕಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಕೋಲ್ಕತ್ತಾದ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಎರಡನೇ ಕ್ಯಾಂಪಸ್ ಸಂಕೀರರ್ಣದ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಆನ್ಲೈನ್ ಮೂಲಕ ಭಾಗವಹಿಸಿದ್ದರು.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ಎದುರಲ್ಲೇ ಮಮತಾ ಬ್ಯಾನರ್ಜಿ ಈ ಹೆಳಿಕೆ ನೀಡಿದ್ದು, ಬಿಜೆಪಿ ನೇತೃತ್ವದ NDA ಸರ್ಕಾರಕ್ಕೆ ಭಾರೀ ಮುಜುಗರವುಂಟಾಗಿದೆ.



Join Whatsapp