Home ಕರಾವಳಿ ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ

ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ

ಬೆಳ್ತಂಗಡಿ: ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಗುರುವಾರ ಸಂಭವಿಸಿದೆ.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ಅವರ ಪುತ್ರ ರೂಪೇಶ್ ಆಚಾರ್ಯ(31) ಮೃತಪಟ್ಟವರು.

ಸ್ವರ್ಣ ಕುಸುರಿ ಕೆಲಸಗಾರರಾಗಿದ್ದ ರೂಪೇಶ್ ಅವರು ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮದ್ಯವ್ಯಸನಿಯಾಗಿದ್ದ ಅವರು  ಗುರುವಾರ ಮಧ್ಯಾಹ್ನ ತನ್ನ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಕೂಡಲೇ 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಅಲ್ಲಿ ಅವರು ಮೃತಪಟ್ಟಿದ್ದರು.

ಗಣೇಶ್ ಅವರ ಮೂವರು ಮಕ್ಕಳಲ್ಲಿ ಹಿರಿಯವನಾಗಿದ್ದ ರೂಪೇಶ್ ವಿವಾಹಿತನಾಗಿದ್ದು, ಪತ್ನಿ, ಪುಟ್ಟ ಮಗುವನ್ನು ಅಗಲಿದ್ದಾರೆ.

Join Whatsapp
Exit mobile version