ಬೆಳ್ತಂಗಡಿ : ಟ್ರ್ಯಾಕ್ಟರ್ ಪಲ್ಟಿ; ಓರ್ವ ಸಾವು , ಇಬ್ಬರು ಗಂಭೀರ

Prasthutha|

ಬೆಳ್ತಂಗಡಿ : ಕಿಂಡಿ ಅಣೆಕಟ್ಟು ಕಾಮಗಾರಿಗೆ ಕಬ್ಬಿಣವನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ತೋಟಕ್ಕೆ ಬಿದ್ದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು ,ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಂಗಾರ್ ಪಲ್ಕೆಯಲ್ಲಿ ನಡೆದಿದೆ.

- Advertisement -

ಮೃತ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಅಶೋಕ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆಯಲ್ಲಿ ಕಿಂಡಿ ಅಣೆಕಟ್ಟಿನ ಕಾಮಗಾರಿ ನಡೆಯುತ್ತಿದ್ದು,  ಇದಕ್ಕೆ ಸಂಸೆಯಿಂದ ಕಬ್ಬಿಣದ ಸರಕು ಸಾಗುತ್ತಿದ್ದ ಟ್ರ್ಯಾಕ್ಟರ್  ಬಂಗಾರ್ ಪಲ್ಕೆಯ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪಕ್ಕದ ಹೊಂಡಕ್ಕೆ ಬಿದ್ದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Join Whatsapp