Home ಕರಾವಳಿ ಬೆಳ್ತಂಗಡಿ| ಕಸದ ತೊಟ್ಟಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ

ಬೆಳ್ತಂಗಡಿ| ಕಸದ ತೊಟ್ಟಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ

ಬೆಳ್ತಂಗಡಿ: ಸಂತೆಕಟ್ಟೆ ಸುವರ್ಣ ಆರ್ಕೇಡ್ ಬಳಿಯ ಕಸದ ತೊಟ್ಟಿಯಲ್ಲಿ ಪೊಲೀಸರು ಧರಿಸುವ ನಾಲ್ಕು ಟೋಪಿ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.


ಮೂರು ಖಾಕಿ ಟೋಪಿ ಹಾಗೂ ಒಂದು ಬಿಳಿ ಟೋಪಿ ಕಸದ ತೊಟ್ಟಿಯಲ್ಲಿ ಕಂಡುಬಂದಿದೆ. ಪೊಲೀಸ್ ಸಮವಸ್ತ್ರ, ಬೆಲ್ಟ್, ಟೋಪಿ ಗೆ ಅದರದ್ದೇ ಆದ ಕಾನೂನು ನಿಯಮಗಳಿವೆ. ಹಾಳಾದ ಟೋಪಿ ಅಥವಾ ಸಮವಸ್ತ್ರವನ್ನು ವಿಲೇವಾರಿ ಮಾಡುವಲ್ಲಿಯೂ ನಿಯಮಗಳನ್ನು ಪಾಲಿಸಬೇಕಾಗಿದೆ.

ಇದೀಗ ಸಾರ್ವಜನಿಕ ರಸ್ತೆ ಬದಿಯ ಕಸದ ತೊಟ್ಟಿಗೆ ಎಸೆದು ಹೋಗುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ದೂರದ ಊರುಗಳಿಗೆ ಹೋಗುವ ಪೊಲೀಸರು ಇದನ್ನು ಇಲ್ಲಿ ಎಸೆದಿರಬಹುದು ಎಂಬ ಸಂಶಯ ಉಂಟಾಗಿದ್ದು, ಪೊಲೀಸರ ಈ ದುರ್ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version