ಬೆಳ್ತಂಗಡಿ: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ಬಳಿಕ ಇದೀಗ ಮೂವರ ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.
ಮಾ.29 ರಂದು ಶುಕ್ರವಾರ ಬೆಳಗ್ಗೆ ಮೃತದೇಹ ಮನೆಗೆ ತಲುಪಿದೆ.
ಶಾಹುಲ್ ಹಮೀದ್ ಹಾಗೂ ಇಸಾಕ್ ರವರ ಮೃತದೇಹ ಬೆಳಗಿನ ಜಾವ ಉಜಿರೆ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ತಲುಪಿದೆ ಹಾಗೂ ಸಿದ್ದೀಕ್ ರವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದೆ ಎಂದು ತಿಳಿದು ಬಂದಿದೆ.