Home ಟಾಪ್ ಸುದ್ದಿಗಳು ಬೆಳ್ತಂಗಡಿ: ಕುತ್ಲೂರು ಗ್ರಾಮಕ್ಕೆ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿ

ಬೆಳ್ತಂಗಡಿ: ಕುತ್ಲೂರು ಗ್ರಾಮಕ್ಕೆ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನವಾಗಿದೆ.

ಈ ಮೂಲಕ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಪಾತ್ರವಾದ ಕರ್ನಾಟಕದ ಏಕೈಕ ಗ್ರಾಮವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ದೇಶದ ಗ್ರಾಮಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಸ್ವಾವಲಂಬನೆಯ ಒಲವು ಹೆಚ್ಚಿಸುವುದಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಕಳೆದ ವರ್ಷ ‘ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೀಷನ್’ ಆರಂಭಿಸಿತ್ತು. ಇದರ ಅಡಿಯಲ್ಲಿ ಪ್ರತಿ ಕೆಟಗರಿಯಿಂದ ಅತ್ಯುತ್ತಮ ಐದು ಗ್ರಾಮೀಣ ಪ್ರವಾಸೋದ್ಯಮ ಗ್ರಾಮಗಳನ್ನು ಗುರುತಿಸಲಾಗುತ್ತದೆ.

ಸ್ಪರ್ಧೆಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತದೆ. ಕುತ್ಲೂರಿನ ಸಾಫ್ಟ್‌ವೇರ್ ಇಂಜಿನಿಯರ್ ಹರೀಶ್ ಡಾಕಯ್ಯ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕತಾರ್‌ನಲ್ಲಿ ಕೆಲಸ ಮಾಡುವ ಅದೇ ಗ್ರಾಮದ ಸಂದೀಪ್ ಪೂಜಾರಿ ಮತ್ತು ಶಿವರಾಜ್ ಜತೆಗೂಡಿ ಸ್ನೇಹಿತರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಸ್ಪರ್ಧಿಗಳು ಅಪ್​ಲೋಡ್ ಮಾಡಿದ ಫೋಟೊ, ವಿಡಿಯೋಗಳು, ಮಾಹಿತಿಗಳನ್ನು ಪರಿಶೀಲನೆ ಮಾಡಿ ನಂತರ ಗ್ರಾಮಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

Join Whatsapp
Exit mobile version