ಬೆಳ್ತಂಗಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬಂಗೇರುಕಟ್ಟೆ ಸಮಿತಿ ಹಾಗೂ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಇದರ ವತಿಯಿಂದ ಬಡ ಯತೀಮ್ ಕುಟುಂಬಕ್ಕೆ ಬೈತುರ್ರಹ್ಮ ಕಾರುಣ್ಯ ಭವನದ ಕೀ ಹಸ್ತಾಂತರ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಪರೇಂಕಿ ಗ್ರಾಮದ ಮಜಲೋಡಿ 2 ನೇ ವಾರ್ಡಿನಲ್ಲಿ ಮುಸ್ಲಿಂ ಲೀಗ್ ಬಂಗೇರಕಟ್ಟೆ ಸಮಿತಿ ಹಾಗೂ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಇದರ ಅಧ್ಯಕ್ಷರಾದ ಅಶ್ರಫ್ ಸಾಲ್ಮರ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಮಾಜಿ ಸಚಿವರಾದ ಬಿ.ರಾಮನಾಥ ರೈ ಅವರು ಹಬೀಬ್ ಹಾಜಿ ಸಾಹೇಬ್ ಹಾಗೂ ಮುಸ್ಲಿಂ ಲೀಗ್ ಮತ್ತು ರಿಲೀಫ್ ಸೆಲ್ ನಾಯಕರ ಸಮ್ಮುಖದಲ್ಲಿ ಕುಟುಂಬಕ್ಕೆ ಕೀ ಹಸ್ತಾಂತರ ಮಾಡಿದರು. ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಉಪಾಧ್ಯಕ್ಷರಾದ ಶಬೀರ್ ಅಝ್ಹರಿ ಪಾಂಡವರಕಲ್ಲು ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಕೆ.ಎಂ ಫಯಾಝ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು ಇಸ್ಮಾಯಿಲ್ ಬಿ.ಸಿ ರೋಡ್ , ಬಂಗೇರುಕಟ್ಟೆ ಮುಸ್ಲಿಂ ಲೀಗ್ ಸಮಿತಿ ಗೌರವಾಧ್ಯಕ್ಷರಾದ ಸಯ್ಯಿದ್ ಅಲೀ , ಬಂಗೇರಕಟ್ಟೆ ಮುಸ್ಲಿಂ ಲೀಗ್ ಮುಖಂಡರಾದ ಅಬೂಬಕ್ಕರ್ , ಅಬ್ದುರ್ರಹ್ಮಾನ್ ಬಂಗೇರಕಟ್ಟೆ , ಆಸೀಫ್ ಪಿ.ಕೆ , ಹಮೀದ್ ಬಂಗೇರಕಟ್ಟೆ, ಮಾಜಿ ಪಂಚಾಯತ್ ಸದಸ್ಯರಾದ ಅಬ್ದುರಹ್ಮಾನ್ ಪಡ್ಪು , ಮುಸ್ಲಿಂ ಲೀಗ್ ಮುಖಂಡರಾದ ಕರೀಮ್ ಕಡಬ , ಆದಂ ಮಸೀದಿ ಬಳಿ , ನಝೀರ್ ಮದನಿ ಅಂದಾಳ್ , ಶಿಹಾಬ್ ತಂಙಳ್ ರಿಲೀಫ್ ಸೆಲ್ ವರ್ಕಿಂಗ್ ಪ್ರೆಸಿಡೆಂಟ್ ನೌಫಲ್ ಅಜ್ಜಿಕಲ್ಲು , ಕಾರ್ಯದರ್ಶಿ ಉಸ್ಮಾನ್ ಸಾಗ್ ಹಳೆಯಂಗಡಿ , ವರ್ಕಿಂಗ್ ಕಾರ್ಯದರ್ಶಿ ಹನೀಫ್ ಕುಂಜತ್ತೂರು, ಆಶಿಕ್ ಬೊಳ್ಳೂರು, ಎಮ್.ಎಸ್.ಎಫ್ ಜಿಲ್ಲಾ ಕೋಶಾಧಿಕಾರಿ ಶಾಹಿದ್ ಮಿತ್ತಬೈಲು ಮತ್ತಿತ್ತರರು ಇದ್ದರು. ಇಸ್ರಾರ್ ಗೂಡಿನಬಳಿ ಸ್ವಾಗತಿಸಿ , ನೌಶಾದ್ ಮಲಾರ್ ವಂದಿಸಿದರು.