Home ಕರಾವಳಿ ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ: ಐವರು ಆರೋಪಿಗಳು NIA ಕಸ್ಟಡಿಗೆ

ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ: ಐವರು ಆರೋಪಿಗಳು NIA ಕಸ್ಟಡಿಗೆ

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಗುರುವಾರ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದೆ.


ನೌಫ‌ಲ್(28), ಅಬಿದ್(22), ಶಿಯಾಬ್‌(32), ಅಬ್ದುಲ್ ಬಶೀರ್(29) ಮತ್ತು ರಿಯಾಜ್(27) ಎಂಬುವರನ್ನು ಎನ್ ಐಎ ಆರು ದಿನಗಳ ವಶಕ್ಕೆ ಪಡೆದುಕೊಂಡಿದೆ.


ಜುಲೈ 27ರಂದು ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಪೊಲೀಸರು ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಹೆಚ್ಚಿನ ತನಿಖೆಗೆ ಎನ್ ಐಎ ಗೆ ವಹಿಸಲಾಗಿತ್ತು.

Join Whatsapp
Exit mobile version