ಸುಳ್ಯ: ಕಳೆದ ವರ್ಷ ಕಳಂಜ ಎಂಬಲ್ಲಿ ನಡೆದಿದ್ದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಎಂಟು ಆರೋಪಿಗಳ ಪೈಕಿ ಅಭಿಲಾಷ್ ಮತ್ತು ಸುನಿಲ್ ಈಗ ಜಾಮೀನು ಲಭಿಸಿದೆ. ಆರು ಮಂದಿಗೆ ಈ ಮೊದಲೇ ಜಾಮೀನು ಸಿಕ್ಕಿತ್ತು.
ಜಾಮೀನು ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ, ಆರೋಪಿಗಳಿಗೆ ಜಾಮೀನು ನೀಡಿದ್ದಾರೆ.