Home ಟಾಪ್ ಸುದ್ದಿಗಳು ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

ಬೆಳ್ಳಾರೆ: ಕಳಂಜದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ.


ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಮಂಜೂರು ಮಾಡಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ರವರು ವಾದ ಮಂಡಿಸಿದ್ದರು. ಒಟ್ಟು ಎಂಟು ಆರೋಪಿಗಳ ಪೈಕಿ ಈ ಮೊದಲು ಮೂರು ಜನ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. 2022ರ ಜು. 19ರಂದು ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ಬಜರಂಗದಳದ ಕಾರ್ಯಕರ್ತರು, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.


ಮಸೂದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಭಿಲಾಶ್, ಸುನಿಲ್ ಕೆ, ಸುಧೀರ್, ಶಿವಪ್ರಸಾದ್, ರಂಜಿತ್ ಬಿ, ಸದಾಶಿವ ಪೂಜಾರಿ, ರಂಜಿತ್, ಭಾಸ್ಕರ ಕೆ ಎಂ ಯನ್ನು ಪೊಲೀಸರು ಬಂಧಿಸಿದ್ದರು.

Join Whatsapp
Exit mobile version