Home ಟಾಪ್ ಸುದ್ದಿಗಳು ಬೆಳಗಾವಿ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್

ಬೆಳಗಾವಿ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್

ಬೆಳಗಾವಿ: ಮಾಧ್ಯಮಗಳ ಮೇಲೆ ರಾಜ್ಯ ಸರ್ಕಾರದ ನಿರ್ಬಂಧ ಮತ್ತೆ ಮುಂದುವರಿದಿದ್ದು, ಸುದ್ದಿ ವಾಹಿನಿಗಳ ಕ್ಯಾಮರಾಗಳನ್ನು ವಿಧಾನಸಭೆಯ ಆವರಣಕ್ಕೆ ತರದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ನಿರ್ಬಂಧ ಹೇರಿದ್ದಾರೆ.

ವಿಧಾನಸಭೆಯ ಸಭಾಂಗಣಕ್ಕೆ ಪ್ರವೇಶ ನಿರ್ಬಂಧಿಸಿ ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಹೊರಗಡೆ ಕ್ಯಾಮರಾಗಳನ್ನು ಬಳಸಲು ಅವಕಾಶವಿತ್ತು. ಆದರೆ ಕ್ಯಾಮರಾಗಳನ್ನು ವಿಧಾನಸಭೆಯ ಹೊರಾಂಗಣಕ್ಕೆ ತರದಂತೆ ಬುಧವಾರ ನಿರ್ಬಂಧ ಹೇರಲಾಗಿದೆ. ಇದನ್ನು ಪ್ರತಿಭಟಿಸಿ ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಪರಿಷತ್ ನಲ್ಲಿ ಮಾಧ್ಯಮಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.

Join Whatsapp
Exit mobile version