ಬೇಲ್ ಮೇಲೆ ಹೊರಗಿರೋನು ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾನೆ: ನಲಪಾಡಿಗೆ ರಮ್ಯಾ ಕಿಕ್ಕ್ ಟ್ವೀಟ್

Prasthutha|

ಬೆಂಗಳೂರು: ಮಾಜಿ ಸಂಸದೆ ನಟಿ ರಮ್ಯಾ ವಿರುದ್ಧ ಮಾತಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ರಮ್ಯಾ ಕಿಡಿಕಾರಿದ್ದು, ನಲಪಾಡ್ ವಿರುದ್ಧದ ಗೂಂಡಾಗಿರಿ ಆರೋಪದ ಕುರಿತಾದ ವರದಿಗಳನ್ನು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಹುಡುಗ ನಲಪಾಡ್, ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ. ನಲಪಾಡ್ ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಕೂಡ ಹೌದು. ಬೇಲ್ ಮೇಲೆ ಹೊರಗಿರೋ ಈತ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ. ವಾಹ್ ! ಎಂದು  ವ್ಯಂಗ್ಯವಾಡಿದ್ದಾರೆ.

ರಾಜೀನಾಮೆ ಬಳಿಕ ವಂಚನೆ ಆರೋಪ ಎದುರಿಸುತ್ತಿರುವ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ನಾಯಕರನ್ನುಒಬ್ಬೊಬ್ಬರಂತೆ ಕಾಲೆಳೆಯುವ ಪ್ರಸಂಗ ಕಂಡುಬರುತ್ತಿದ್ದು, ಬಿಜೆಪಿ ಕೂಡಾ ನಟಿ ಜೊತೆಜೊತೆಗೆ ಕೈ ವಿರುದ್ಧ ಟ್ವೀಟ್ ಸಮರ ಸಾರುತ್ತಿದೆ.

Join Whatsapp