Home ಟಾಪ್ ಸುದ್ದಿಗಳು ರಾಜ್ಯದಲ್ಲಿ JDS ಅಧಿಕಾರಕ್ಕೆ ಬಂದರೆ ಗೋಮಾಂಸ ವ್ಯಾಪಾರಕ್ಕೆ ಅವಕಾಶ: ಸಿ.ಎಂ. ಇಬ್ರಾಹಿಂ

ರಾಜ್ಯದಲ್ಲಿ JDS ಅಧಿಕಾರಕ್ಕೆ ಬಂದರೆ ಗೋಮಾಂಸ ವ್ಯಾಪಾರಕ್ಕೆ ಅವಕಾಶ: ಸಿ.ಎಂ. ಇಬ್ರಾಹಿಂ

►ಗೋ ಹತ್ಯೆ ನಿಷೇಧ ಕಾಯ್ದೆ ರದ್ದು

ಹುಮನಾಬಾದ್: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಪುರದ ಬಿಜೆಪಿ ಸಚಿವರೊಬ್ಬರು ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಅವರಿಗೆ ಬಿಜೆಪಿಯವರು ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರೈತರು ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕಂಗಾಲಾಗಿದ್ದಾರೆ. ಹೈನುಗಾರಿಕೆ ಮಾಡುವುದಕ್ಕಾಗಿ ರೈತರು ₹ 60–70 ಸಾವಿರ ನೀಡಿ ಹಸುಗಳನ್ನು ತಂದರೆ ಅದು ಹಾಲು ನೀಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ. ಆದರೆ, ಈ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು’ ಎಂದರು.

Join Whatsapp
Exit mobile version