Home ಕರಾವಳಿ ರಾಜಕೀಯ ಪಕ್ಷಕ್ಕೆ ಗುಲಾಮರಾಗದೆ ಸ್ವಾಭಿಮಾನದ ರಾಜಕೀಯ ಅಧಿಕಾರಕ್ಕೆ ಧ್ವನಿಯಾಗಿ: ರಿಯಾಝ್ ಫರಂಗಿಪೇಟೆ

ರಾಜಕೀಯ ಪಕ್ಷಕ್ಕೆ ಗುಲಾಮರಾಗದೆ ಸ್ವಾಭಿಮಾನದ ರಾಜಕೀಯ ಅಧಿಕಾರಕ್ಕೆ ಧ್ವನಿಯಾಗಿ: ರಿಯಾಝ್ ಫರಂಗಿಪೇಟೆ

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಮತ್ತು ಪರಾಭವಗೊಂಡ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಮತ್ತು ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಸಂಗಬೆಟ್ಟು ಬ್ಲಾಕ್ ಸಮಿತಿ ಅಧ್ಯಕ್ಷ ಇರ್ಫಾನ್ ತುಂಬೆಯವರ ಅಧ್ಯಕ್ಷತೆಯಲ್ಲಿ ಫರಂಗಿಪೇಟೆಯಲ್ಲಿ ನಡೆಯಿತು

        ಈ ಸಂದರ್ಭದಲ್ಲಿ ಮಾತನಾಡಿದ ಮುಂಬರುವ ವಿಧಾನ ಸಭಾ ಚುನಾವಣೆಯ ಮಂಗಳೂರು ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ, ಕುಡಿಯುವ ನೀರು, ರಸ್ತೆ, ಶಿಕ್ಷಣ, ಸುಸಜ್ಜಿತ ಆಟದ ಮೈದಾನ, ಸರಕಾರಿ ಉದ್ಯೋಗ, ಆರೋಗ್ಯಕ್ಕೆ ಸಂಭಂದಪಟ್ಟ ಇತ್ಯಾದಿ ಮೂಲಭೂತ ಅತೀ ಅಗತ್ಯವಾದ ಸೌಕರ್ಯವನ್ನು ನಿರೀಕ್ಷಿಸಿದ ಮಟ್ಟದಲ್ಲಿ ಜನರಿಗೆ ಒದಗಿಸಿ ಕೊಡಲು ಸಾಧ್ಯವಾಗದ ಜನಪ್ರತಿನಿಧಿಗಳ  ವೈಫಲ್ಯಗಳನ್ನು ತಿಳಿದು ಸಂಕಷ್ಟದ ಸಮಯದಲ್ಲಿ ಆಸರೆಯಾಗದ ರಾಜಕೀಯ ಪಕ್ಷಕ್ಕೆ ಮತದಾರರು ಗುಲಾಮರಾಗದೆ ಸ್ವಾಭಿಮಾನದ ರಾಜಕೀಯ ಅಸ್ಮಿತೆಗಾಗಿ ಪರ್ಯಾಯ ರಾಜಕೀಯ ಪಕ್ಷ SDPI ಯನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.

ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ಇಲ್ಯಾಸ್ ತುಂಬೆ ಮಾತನಾಡಿ, 40 ವರ್ಷಗಳಿಂದ ಪುದು ಗ್ರಾಮ ಪಂಚಾಯತ್ ನಲ್ಲಿ ಒಂದೇ ಪಕ್ಷದ ಬೆಂಬಲಿತರು ಆಡಳಿತ ನಡೆಸುತ್ತಿದ್ದು ಜನಸಾಮಾನ್ಯರು ವಿವಿಧ ಅಗತ್ಯ ದಾಖಲೆಗಾಗಿ ಲಂಚ ನೀಡಲೇ ಬೇಕಾದ ಅನಿವಾರ್ಯ ತೆಯನ್ನು ಇಲ್ಲಿನ ಜನಪ್ರತಿನಿದಿನಗಳು ಸೃಷ್ಟಿ ಮಾಡಿ ಭ್ರಷ್ಟಾಚಾರದ ಕೂಪವಾಗಿ ಪಂಚಾಯತ್ ಕೇಂದ್ರವನ್ನು ಪರಿವರ್ತಿಸಿದ್ದಾರೆ.  ಇದರಿಂದ ಬೇಸತ್ತ ಜನಸಾಮಾನ್ಯರು ಪರ್ಯಾಯವಾಗಿ SDPI ಬೆಂಬಲಿಸಿದ್ದಾರೆ ಎಂದರು.

      ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಮಂಗಳೂರು ಕ್ಷೇತ್ರ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಮುನೀಶ್ ಅಲಿ, ಜಿಲ್ಲಾ ಸಮಿತಿ ಸದಸ್ಯ ಖಾದರ್ ಫರಂಗಿಪೇಟೆ, ಮಂಗಳೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರವಿ ಕುಟಿನ್ಹ, ವಿಮ್ ಬಂಟ್ವಾಳ ತಾಲೂಕು ಅಧ್ಯಕ್ಷೆ ಶಾಕಿರಾ, ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ, ಸಂಗಬೆಟ್ಟು ಬ್ಲಾಕ್ ಕಾರ್ಯದರ್ಶಿ ಹದಿಯತುಲ್ಲಾ ಕಲಾಯಿ, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹನೀಫ್ ಕುಂಜತ್ಕಳ, ಪಜೀರ್ ಗ್ರಾಮ ಪಂಚಾಯತ್ ಸದಸ್ಯೆ ಸುನೀತಾ ಸಾಲ್ದಾನ, ಪುದು ಗ್ರಾಮ ಪಂಚಾಯತ್ ಸದಸ್ಯರುಗಳಾದ ನಝೀರ್ ಕುಂಜತ್ಕಳ, ನವೀನ್ ಸಾಲ್ದಾನ, ರೆಬೆಕಾ ಸಾಲ್ದಾನ, ಕೈರುನ್ನಿಸಾ ಸಿರಾಜ್, ರುಕ್ಸಾನ ಸಲಾಮ್, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ತುಂಬೆ, ಮೂಸಬ್ಬ ತುಂಬೆ, ಶಾಹುಲ್ ತಲಪಾಡಿ, ಸಂಘಬೆಟ್ಟು ಬ್ಲಾಕ್ ಸಮಿತಿ ಸದಸ್ಯ ಅನ್ಸಾರ್ ಅಮೆಮಾರ್, ಗ್ರಾಮ ಸಮಿತಿ ಕಾರ್ಯದರ್ಶಿ ಶೆರೀಫ್ ಕುಂಪನಮಜಲ್, ಮತ್ತಿತರರು ಉಪಸ್ಥಿತರಿದ್ದರು.

    ಗ್ರಾಮ ಸಮಿತಿ ಅಧ್ಯಕ್ಷ ಶಾಫಿ ಅಮ್ಮೆಮ್ಮಾರ್ ಸ್ವಾಗತಿಸಿ, ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version