Home ಟಾಪ್ ಸುದ್ದಿಗಳು ರಸ್ತೆಗುಂಡಿ ಮುಚ್ಚಲು ಪ್ರತಿ ವಾರ್ಡ್‌ ಗೆ 15 ಲಕ್ಷ ರೂ. ಬಿಡುಗಡೆ ಮಾಡಿದ ಬಿಬಿಎಂಪಿ

ರಸ್ತೆಗುಂಡಿ ಮುಚ್ಚಲು ಪ್ರತಿ ವಾರ್ಡ್‌ ಗೆ 15 ಲಕ್ಷ ರೂ. ಬಿಡುಗಡೆ ಮಾಡಿದ ಬಿಬಿಎಂಪಿ


ಬೆಂಗಳೂರು: ರಸ್ತೆಗಳಲ್ಲಿ ಗುಂಡಿಗಳು ಕಾಣಿಸುತ್ತಿವೆ. ನಗರದಲ್ಲಿ ಬರೋಬ್ಬರಿ 11,366 ರಸ್ತೆ ಗುಂಡಿಗಳಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂಕಿ ಅಂಶಗಳು ತಿಳಿಸಿವೆ. ಇದೀಗ ಮಾನ್ಸೂನ್‌ ಮುಗಿದಿದ್ದು, ಪಾಲಿಕೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಜ್ಜಾಗಿದೆ. ಗುಂಡಿಗಳನ್ನು ಮುಚ್ಚಲು 225 ವಾರ್ಡ್‌ಗಳಿಗೆ ತಲಾ ₹15 ಲಕ್ಷ ಬಿಡುಗಡೆ ಮಾಡಿದೆ.

225 ವಾರ್ಡ್‌ಗಳಿಗೆ ತಲಾ ₹15 ಲಕ್ಷದಂತೆ ₹33 ಕೋಟಿಯನ್ನು ಹಂಚಲಾಗಿದೆ. ಕಳೆದ ವರ್ಷ ವಾರ್ಡ್‌ವೊಂದಕ್ಕೆ ₹20 ಲಕ್ಷ ನೀಡಲಾಗಿತ್ತು. ಕಳೆದ ಬಾರಿಯ ಅನುದಾನ ಬಳಕೆ ತೃಪ್ತಿಕರವಾಗಿಲ್ಲದ ಕಾರಣ ಈ ಬಾರಿ ಹಣ ಕಡಿತ ಮಾಡಲಾಗಿದೆ ಎನ್ನಲಾಗಿದೆ.

Join Whatsapp
Exit mobile version