Home ಟಾಪ್ ಸುದ್ದಿಗಳು ಬಿಬಿಎಂಪಿ ಜೊತೆ ಸಭೆ ಬಳಿಕ ಹೊಷ ವರ್ಷಾಚರಣೆ ರೂಪುರೇಷೆ ಸಿದ್ಧ: ಬಿ ದಯಾನಂದ್

ಬಿಬಿಎಂಪಿ ಜೊತೆ ಸಭೆ ಬಳಿಕ ಹೊಷ ವರ್ಷಾಚರಣೆ ರೂಪುರೇಷೆ ಸಿದ್ಧ: ಬಿ ದಯಾನಂದ್

ಬೆಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಸ ವರ್ಷಾಚರಣೆಯ ಪರಿಷ್ಕೃತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆಯುಕ್ತರು “ನ್ಯೂ ಇಯರ್ ಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಾಗುತ್ತಿದೆ. ಆಚರಣೆ ನಡೆಸುವುದರಿಂದ ಯಾರಿಗೂ ಕೂಡ ಅಡಚಣೆ ಆಗದ ರೀತಿ ನೋಡಿಕೊಳ್ಳಲಾಗುತ್ತದೆ. ಕಳೆದ ಬಾರಿ ಹೇಗೆ ನಡೆಸಲಾಗಿತ್ತೋ ಈ ಬಾರಿಯೂ ಅದೇ ರೀತಿ ಇರಲಿದೆ. ಎಂ.ಜಿ. ರೋಡ್ ನಲ್ಲಿ ಮಧ್ಯರಾತ್ರಿ ಆಚರಣೆಗೆ ಅನುಮತಿ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ಹೊಸ ಅಲೆಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version