ಲೋಕಸಭೆ ಚುನಾವಣೆ ಮುಗಿದ ಕೂಡಲೇ ಬಿಬಿಎಂಪಿ ಚುನಾವಣೆ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಕೂಡಲೇ ಬಿಬಿಎಂಪಿ ಹಾಗೂ ಇತರೆ ಚುನಾವಣೆಗಳನ್ನು ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹೇಳಿದರು.

- Advertisement -


ಈ ಬಗ್ಗೆ ಮಾತನಾಡಿದ ಅವರು, ಮೊದಲು ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಪೂರ್ಣಗೊಂಡ ಒಂದು ಅಥವಾ ಎರಡು ತಿಂಗಳುಗಳಲ್ಲಿ ಬಿಬಿಎಂಪಿ ಹಾಗೂ ಇತರೆ ಚುನಾವಣೆಗಳು ನಡೆಯಲಿವೆ. ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಹೇಳಿದರು.


ನಾವು 225 ವಾರ್ಡ್ ಗಳನ್ನು ರಚಿಸಿದ್ದೇವೆ. ಸಂಘಟನೆಯ ಆಧಾರದ ಮೇಲೆ ನ್ಯಾಯ ಒದಗಿಸಲಾಗುವುದು. ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುವುದು. ಅದು ನಮ್ಮ ಕರ್ತವ್ಯ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. “ಬೆಂಗಳೂರಿನಲ್ಲಿ ನಾಲ್ಕು ಸ್ಥಾನಗಳಿದ್ದು, ಬೂತ್ ಮಟ್ಟದ ಏಜೆಂಟರನ್ನು ನೇಮಿಸಬೇಕು. ಪ್ರತಿ ಬೂತ್ ನ ಏಜೆಂಟರು ಮನೆಗಳಿಗೆ ಹೋಗಿ. ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಬಗ್ಗೆ ತಿಳಿಸಬೇಕು. ಮತದಾರರ ಸಂಖ್ಯೆ ಹಲವಾರು ಲಕ್ಷಗಳಷ್ಟು ಹೆಚ್ಚಾಗಿದೆ. ಇದರ ನೈಜತೆ ಕುರಿತು ನಾನೂ ಪರಿಶೀಲನೆ ನಡೆಸುತ್ತೇನೆಂದು ಹೇಳಿದರು.



Join Whatsapp