Home ಟಾಪ್ ಸುದ್ದಿಗಳು ಕೆಂಗೇರಿನಲ್ಲಿ ಹಕ್ಕಿ ಪಿಕ್ಕಿ ಜನಾಂದವರ ಮನೆ, ಚರ್ಚ್ ಧ್ವಂಸಗೈದ ಬಿಬಿಎಂಪಿ: ವಿಧಾನ ಸೌಧ ಚಲೋ ನಡೆಸುವ...

ಕೆಂಗೇರಿನಲ್ಲಿ ಹಕ್ಕಿ ಪಿಕ್ಕಿ ಜನಾಂದವರ ಮನೆ, ಚರ್ಚ್ ಧ್ವಂಸಗೈದ ಬಿಬಿಎಂಪಿ: ವಿಧಾನ ಸೌಧ ಚಲೋ ನಡೆಸುವ ಎಚ್ಚರಿಕೆ ನೀಡಿದ ಎಸ್.ಡಿ.ಪಿ.ಐ

ಬೆಂಗಳೂರು: ಬೆಂಗಳೂರು ಸಮೀಪದ ಕೆಂಗೇರಿಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಚರ್ಚ್ ಅನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ಧ್ವಂಸಗೊಳಿಸಿ, ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದವರ ಮನೆಗಳನ್ನು ಧ್ವಂಸಗೊಳಿಸಿ ಘಟನೆ ನಡೆದಿದೆ.

ಅಧಿಕಾರಿಗಳ ಕ್ರೂರ ವರ್ತನೆಯಿಂದ ನೂರಾರು ಮಂದಿ ನಿರಾಶ್ರಿತರಾಗಿದ್ದು, ರಸ್ತೆಯಲ್ಲೇ ಬದುಕು ದೂಡುತ್ತಿರುವ ಮನಕಲಕುವ ದೃಶ್ಯ ಕೆಂಗೇರಿಯಲ್ಲಿ ಕಂಡುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್.ಡಿ.ಪಿ.ಐ ಮುಖಂಡರು ಸ್ಥಳಕ್ಕೆ ಧಾವಿಸಿ ತಕ್ಷಣ ನಿರಾಶ್ರಿತರಿಗೆ ಆಶ್ರಯ ಒದಗಿಸಬೇಕು ಹಾಗೂ ಪರಿಹಾರ ವಿತರಬೇಕು ಎಂದು ಒತ್ತಾಯಿಸಿದರು. ಸರ್ಕಾರ ನಿರಾಶ್ರಿತರ ಬೇಡಿಕೆಯನ್ನು ಈಡೇರಿಸದಿದ್ದರೆ ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗುವುದೆಂದು ಎಂಬ ಎಚ್ಚರಿಕೆಯನ್ನು ಪಕ್ಷ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಪ್ರಸಕ್ತ ಭಾರತದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮತ್ತು ಬಿಜೆಪಿ ಸರ್ಕಾರ ನಿರಂತರವಾಗಿ ಕ್ರೈಸ್ತರ ಮೇಲೆ ದಾಳಿ ಮಾಡುವ ಮೂಲಕ ಅವರ ಭಾವನೆಗಳನ್ನು ಕೆರಳಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಕೆಂಗೇರಿಯಲ್ಲಿ ಚರ್ಚ್ ಗೊಳಿಸಲಾಗಿದೆ. ಹಕ್ಕಿ ಬಿಕ್ಕಿ ಜನಾಂಗದ ಕನಿಷ್ಠ ಹತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಈ ಹ್ಯೇಯ ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಧ್ವಂಸಗೊಂಡ ಚರ್ಚ್ ಮತ್ತು ಹಕ್ಕಿಬಿಕ್ಕಿ ಸಮುದಾಯಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಸಕ್ತ ಬೆಂಗಳೂರಿನ ಕೆಂಗೇರಿಯಲ್ಲಿ ಕ್ರೈಸ್ತರ ಚರ್ಚ್ ಮತ್ತು ಹಕ್ಕಿಬಿಕ್ಕಿ ಸಮುದಾಯಕ್ಕೆ ಸೇರಿದ ಕನಿಷ್ಠ ಹತ್ತು ಮನೆಗಳನ್ನು ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶದ ಮೇರೆಗೆ ಧ್ವಂಸಗೊಳಿಸಿದ್ದರು ಎಂದು ಹೇಳಲಾಗಿದೆ.


ಸುಮಾರು 40 ವರ್ಷಗಳ ಹಿಂದೆ ಹಕ್ಕಿಬಿಕ್ಕಿ ಸಮುದಾಯದವರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಟ್ಟಿಸಿದ್ದ ಚರ್ಚ್ ಅನ್ನು ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. 140 ಕುಟುಂಬಗಳನ್ನು ಹೊಂದಿರುವ ಹಕ್ಕಿಬಿಕ್ಕಿ ಸಮುದಾಯದವರ ಚರ್ಚ್ ಮತ್ತು ಮನೆಗಳನ್ನು ಸುಮಾರು 500 ರಷ್ಟಿದ್ದ ಪೊಲೀಸರ ಸಮ್ಮುಖದಲ್ಲಿ ಧ್ವಂಸಗೊಳಿಸಲಾಗಿದೆ.


ಪಾಲಿಕೆಯ ಈ ಜನವಿರೋಧಿ ಧೋರಣೆಯನ್ನು ಖಂಡಿಸಿದ ಎಸ್.ಡಿ.ಪಿ.ಐ, ಸಂತ್ರಸ್ತರಿಗೆ ಸೂಕ್ತ ನ್ಯಾಯ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಕ್ರಮ್ ಹಸನ್ ಉಪಸ್ಥಿತರಿದ್ದರು.

Join Whatsapp
Exit mobile version