Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಮತ ವಿಭಜಿಸಬೇಡಿ: ಉವೈಸಿಗೆ ಮೌಲಾನಾ ಸಜ್ಜಾದ್ ನೂಮಾನಿ ಮನವಿ

ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಮತ ವಿಭಜಿಸಬೇಡಿ: ಉವೈಸಿಗೆ ಮೌಲಾನಾ ಸಜ್ಜಾದ್ ನೂಮಾನಿ ಮನವಿ

ಲಕ್ನೋ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಮ್ ಮತಗಳನ್ನು ವಿಭಜಿಸದಂತೆ ಆಲ್ ಇಂಡಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (AIMPLB) ಹಿರಿಯ ಸದಸ್ಯ ಮೌಲಾನಾ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ ಅವರು ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿಗೆ ಪತ್ರ ಬರೆದಿದ್ದಾರೆ.

ತಮ್ಮ ಪಕ್ಷ ಗೆಲ್ಲುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಉವೈಸಿಗೆ ನೂಮಾನಿ ಒತ್ತಾಯಿಸಿದ್ದಾರೆ.

ಮೌಲಾನಾ ಅವರು ಖ್ಯಾತ ವಿದ್ವಾಂಸರಾಗಿದ್ದಾರೆ. ಮಾತ್ರವಲ್ಲ ಅವರು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ.

ಎಐಎಂಐಎಂ ಪ್ರಸಕ್ತ ಉತ್ತರ ಪ್ರದೇಶ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧೆ ನಡೆಸುವುದಾಗಿ ಸಂಸದ ಉವೈಸಿ ಈಗಾಗಲೇ ಘೋಷಿಸಿದ್ದಾರೆ.

Join Whatsapp
Exit mobile version