ಬಟ್ಲಾ ಹೌಸ್ ಸ್ಪೋಟದ 13 ವರ್ಷಗಳ ನಂತರ, ದೆಹಲಿ ನ್ಯಾಯಾಲಯವು ಸೋಮವಾರ ಇಂಡಿಯನ್ ಮುಜಾಹಿದ್ದೀನ್ ನ ಅರಿಜ್ ಖಾನ್ ಗೆ ಮರಣದಂಡನೆ ವಿಧಿಸಿದೆ.
ಸೆಪ್ಟೆಂಬರ್ 19, 2008 ರಂದು ದೆಹಲಿ ಪೊಲೀಸರ ವಿಶೇಷ ತಂಡವು ಜಾಮಿಯಾ ನಗರದ ಬಟ್ಲಾ ಹೌಸ್‌ನಲ್ಲಿ ಎನ್‌ಕೌಂಟರ್ ನಡೆಸಿದ್ದು, ಇದರಲ್ಲಿ ಇಬ್ಬರು ಇಂಡಿಯನ್ ಮುಜಾಹಿದ್ದೀನ್ ಸದಸ್ಯರು ಮತ್ತು ಇನ್ಸ್‌ಪೆಕ್ಟರ್ ಶರ್ಮಾ ಕೊಲ್ಲಲ್ಪಟ್ಟಿದ್ದರು. ಆ ಆರೋಪದ ಹಿನ್ನಲೆಯಲ್ಲಿ 14 ಫೆಬ್ರವರಿ 2018 ರಂದು ಬಂಧಿಸಲಾಗಿದ್ದು ಸೋಮವಾರ ಅರಿಜ್ ಖಾನ್ ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಮರಣದಂಡನೆ ವಿಧಿಸಿದ್ದಾರೆ.
ಅರಿಜ್ ಖಾನ್ ಗೆ ಸೆಕ್ಷನ್ 186, 333, 353, 302, 307, 174 (ಎ), 34 ಮತ್ತು ಶಸ್ತ್ರಾಸ್ತ್ರಗಳ ಸೆಕ್ಷನ್ 27 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆತನನ್ನು ಅಪರಾಧಿ ಎಂದು ಪರಿಗಣಿಸಿ ಮರಣದಂಡನೆ ವಿಧಿಸಲಾಗಿದೆ.