Home ಕರಾವಳಿ ಹಿರಿಯ ಬ್ಯಾರಿ ಸಾಹಿತಿ ಯು.ಎ. ಖಾಸಿಮ್ ಉಳ್ಳಾಲ ನಿಧನ

ಹಿರಿಯ ಬ್ಯಾರಿ ಸಾಹಿತಿ ಯು.ಎ. ಖಾಸಿಮ್ ಉಳ್ಳಾಲ ನಿಧನ

ಮಂಗಳೂರು: ಹಿರಿಯ ಬ್ಯಾರಿ ಸಾಹಿತಿ ಯು.ಎ. ಖಾಸಿಮ್ ಉಳ್ಳಾಲ ಸೋಮವಾರ ಬೆಳಗ್ಗೆ ಉಳ್ಳಾಲದ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಅವರಿಗೆ 74 ವರ್ಷ ವಯಸ್ಸಾಗಿತ್ತು.


ಖಾಸಿಮ್ ಅವರು ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ಕತೆ, ಕಾದಂಬರಿ, ಕವನ, ಲೇಖನ ಸೇರಿದಂತೆ ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.


ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಕೇಂದ್ರ ಬ್ಯಾರಿ ಪರಿಷತ್ ಮತ್ತು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಅವರು ಬ್ಯಾರಿ ಸಮುದಾಯದಲ್ಲಿ ಸಾಹಿತ್ಯ ಅಭಿರುಚಿಯನ್ನು ಮೂಡಿಸುವಲ್ಲಿ ಶ್ರಮವಹಿಸಿದ್ದರು.


ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Join Whatsapp
Exit mobile version