Home ಕರಾವಳಿ ಬಂಟ್ವಾಳ: ನರ್ತೆ ಹೆಕ್ಕುವ ವೇಳೆ ಕೆಸರಿನಲ್ಲಿ ಹೂತು ಯುವಕ ಮೃತ್ಯು

ಬಂಟ್ವಾಳ: ನರ್ತೆ ಹೆಕ್ಕುವ ವೇಳೆ ಕೆಸರಿನಲ್ಲಿ ಹೂತು ಯುವಕ ಮೃತ್ಯು

ಬಂಟ್ವಾಳ: ಸಾರಿಗಾಗಿ ಗದ್ದೆಯೊಂದರಲ್ಲಿ ನರ್ತೆ( ಶಂಕುಹುಳು) ಹೆಕ್ಕುವ ವೇಳೆ ಯುವಕನೋರ್ವ ಕೆಸರಿನಲ್ಲಿ ಹೂತು ಮೃತಪಟ್ಟ ಘಟನೆ ಪೊಳಲಿ ಸಮೀಪದ ಕಲ್ಕುಟದಲ್ಲಿ ಗುರುವಾರ ನಡೆದಿದೆ.


ಮೃತರನ್ನು ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್ (31) ಎಂದು ಗುರುತಿಸಲಾಗಿದೆ.


ದಾಮೋದರ್ ನರ್ತೆ ಹೆಕ್ಕುತ್ತಿದ್ದ ವೇಳೆ ಆಯತಪ್ಪಿ ಗದ್ದೆಗೆ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದರಿಂದ ಅವರು ಕುತ್ತಿಗೆಯವರೆಗೂ ಹೂತು ಹೋಗಿ, ಮೇಲಕ್ಕೆ ಬರಲು ಆಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version