ಬಂಟ್ವಾಳ | ಮೀನು ವ್ಯಾಪಾರದಲ್ಲಿ ನಷ್ಟ: ಯುವಕ ಆತ್ಮಹತ್ಯೆ !

Prasthutha|

ಬಂಟ್ವಾಳ: ಸಾಲದ ಬಾಧೆಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಸಜೀಪದಲ್ಲಿ ನಡೆದಿದೆ.

- Advertisement -


ಮೃತರನ್ನು ಸಜೀಪ ಪಡು ಗ್ರಾಮದ ತಲೆಮೊಗರು ನಿವಾಸಿ ಸನತ್ ಕುಮಾರ್ ಎಂದು ಗುರುತಿಸಲಾಗಿದೆ.


ಸನತ್ ಅವರು ಮೀನು ಮಾರಾಟಕ್ಕಾಗಿ ಇತ್ತೀಚಿಗೆ ಸಾಲ ಮಾಡಿ ಟೆಂಪೋ ರಿಕ್ಷಾವನ್ನು ಖರೀದಿ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೀನು ವ್ಯಾಪಾರದಲ್ಲಿ ಹಣ ಕಳೆದುಕೊಂಡು ವಾಹನ ಖರೀದಿಗಾಗಿ ಮಾಡಿದ್ದ ಬ್ಯಾಂಕ್ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿರಿಲ್ಲ ಎಂದು ಹೇಳಲಾಗಿದೆ. ಅದಕ್ಕಾಗಿ ಟೆಂಪೋ ಕೂಡ ಮಾರಾಟ ಮಾಡಿದ್ದರು. ಜೊತೆಗೆ ಕೋಳಿ ಅಂಕಕ್ಕೆ ಹೋಗುತ್ತಿದ್ದ ಅವರು ಅಲ್ಲಿಯೂ ಹಣ ಕಳೆದುಕೊಂಡು ಮಾನಸಿಕವಾಗಿ ನೊಂದುಕೊಂಡಿದ್ದು, ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.