ಬಂಟ್ವಾಳ: ವಗ್ಗ ಸಮೀಪದ ಅಂಚಿಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಮರಿಗೆ ಉರುಳಿ ಮಗುಚಿ ಬಿದ್ದಿದೆ.
ಬೆಳ್ತಂಗಡಿ ತಾಲೂಕಿನ ಜಾರಿಗೆ ಬೈಲು ನಿವಾಸಿಗಳಾದ ಕಾರು ಚಾಲಕ ಸಾಹಿಕ್, ಸಹ ಪ್ರಯಾಣಿಕರಾದ ಶಾಹಿನಾ, ಫೌಝಿಯಾ, ಸೌಧಾ ಮತ್ತು 6 ತಿಂಗಳ ಮಗು ಪವಾಡಸದೃಶವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರೊಬ್ಬರನ್ನು ಭೇಟಿ ಮಾಡಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಗೊಂಡ ಎಲ್ಲರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.