ಬಂಟ್ವಾಳ | ಶಾಲಾ ಕ್ರೀಡಾಂಗಣಕ್ಕೆ ಮಂಜೂರಾದ 10 ಕೋಟಿ ರೂ. ಹಣ ಬಿಡುಗಡೆಗೆ ಮಂಜುನಾಥ ಭಂಡಾರಿ ಪತ್ರ

- Advertisement -

ಬಂಟ್ವಾಳ: ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಹತ್ತಿರ ಸರ್ವೇ ಸಂಖ್ಯೆ 167/ಎ3, 167/1ಎಂ ಮತ್ತು 167/ 182 ರಲ್ಲಿ ಒಟ್ಟು 5.25 ಎಕರೆ ಸ್ಥಳದಲ್ಲಿ ಆಟದ ಮೈದಾನದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಹಿಂದೆ ರೂ. 10.00 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ ಈವರೆಗೆ ಮಂಜೂರಾದ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕ್ರೀಡಾ ಇಲಾಖೆಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪತ್ರ ಬರೆದಿದ್ದಾರೆ.

- Advertisement -

ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳ ಆಟದ ಹಾಗೂ ಶಾರೀರಿಕ ತರಬೇತಿ ಚಟುವಟಿಕೆಗಳಿಗೆ ಇದರಿಂದ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಾತ್ವಿಕ ಅನುಮೋದನೆ ನೀಡಿದ 10.00 ಕೋಟಿ ರೂಪಾಯಿ ಅನುದಾನವನ್ನು ಆರ್ಥಿಕ ಇಲಾಖೆಯಿಂದ ತ್ವರಿತವಾಗಿ ಬಿಡುಗಡೆ ಮಾಡಿದ್ದಲ್ಲಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಆರಂಭಿಸಬಹುದಾಗಿದೆ.
ಆದ್ದರಿಂದ ಬೆಂಜನಪದವು ಪ್ರದೇಶದ ಕ್ರೀಡಾ ಪಟು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಅನುದಾದ ಬಿಡುಗಡೆ ಮಾಡುವಂತೆ ಸೂಕ್ತ ನಿರ್ದೇಶನ ನೀಡುವಂತೆ ಮಂಜುನಾಥ ಭಂಡಾರಿ ಹೇಳಿದ್ದಾರೆ.

ರಮಾನಾಥ ರೈ ಸಚಿವರಾಗಿದ್ದಾಗ 10.00 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದರು. ಬಳಿಕ ಅದು ಬಿಡುಗಡೆಗೆ ವಿಳಂಬವಾಗಿದೆ. ತಕ್ಷಣ ಹಣ ಬಿಡುಗಡೆಗೆ ಭಂಡಾರಿ ಮನವಿ ಮಾಡಿದ್ದಾರೆ‌.

- Advertisement -


Must Read

Related Articles