Home ಕರಾವಳಿ ಬಂಟ್ವಾಳ | ಅಂಗಡಿ ಬಾಗಿಲಿನಲ್ಲಿ ʼName jihadʼ ಬರಹ ಪ್ರತ್ಯಕ್ಷ: ದೂರು ದಾಖಲು

ಬಂಟ್ವಾಳ | ಅಂಗಡಿ ಬಾಗಿಲಿನಲ್ಲಿ ʼName jihadʼ ಬರಹ ಪ್ರತ್ಯಕ್ಷ: ದೂರು ದಾಖಲು

ಬಂಟ್ವಾಳ: ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು ‘Name jihad’ ಎಂದು ಬರೆದ ಘಟನೆ ವಿಟ್ಲ ಪೇಟೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲದ ಪೇಟೆಯ ದೀಪಕ್ ವಾಚ್ ವರ್ಕ್ಸ್ ನ ಶಟರ್ ಮೇಲೆ ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ನೇಮ್ ಜಿಹಾದ್ ಎಂದು ಬರೆದಿದ್ದು, ಮುಂಜಾನೆ ಅಂಗಡಿ ಮಾಲೀಕ ಬಾಗಿಲು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version