Home ಟಾಪ್ ಸುದ್ದಿಗಳು ಬಂಟ್ವಾಳ | ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ

ಬಂಟ್ವಾಳ | ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ

ವಿಟ್ಲ: ಮಾರ್ಬಲ್ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಬಳಿ ನಡೆದಿದೆ.


ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಗಾಯಾಳುಗಳನ್ನು ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ.

Join Whatsapp
Exit mobile version