ಬಂಟ್ವಾಳ | ಪಿಕ್ ಅಪ್ ಮರಕ್ಕೆ ಢಿಕ್ಕಿ: ಇಬ್ಬರು ಯುವಕರು ಸಾವು

Prasthutha|

ಬಂಟ್ವಾಳ: ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ  ತುಂಬೆ ಬಳಿ ನಡೆದಿದೆ.

- Advertisement -

ಉಪ್ಪಿನಂಗಡಿ ನಿವಾಸಿಗಳಾದ ಚೇತನ್ ( 25 ) ಹಾಗೂ ಆಶಿತ್ ( 21 ) ಮೃತಪಟ್ಟವರೆಂದು ಗುರುತಿಸಲಾಗಿದ್ದು, ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ.

ಕ್ಯಾಟರಿಂಗ್ ಮುಗಿಸಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಚೇತನ್ ಹಾಗೂ ಆಶಿತ್ ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಇಬ್ಬರು ಅದಾಗಲೇ ಮೃತಪಟ್ಟಿದ್ದಾರೆ.

- Advertisement -

ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp