ಬಂಟ್ವಾಳ | ಕಾರು – ಬೈಕ್ ನಡುವೆ ಅಪಘಾತ: ಸವಾರರಿಬ್ಬರಿಗೆ ಗಾಯ

Prasthutha|

ಬಂಟ್ವಾಳ: ಕಾರು – ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕಡೆಗೋಳಿ ಬಳಿ ನಡೆದಿದೆ.

- Advertisement -

ಮಂಗಳೂರಿನಿಂದ ಬಿಸಿ ರೋಡ್ ಗೆ ಹೋಗುವ ಕಾರು, ಡಿವೈಡರ್ ಮೇಲೆ ಹರಿದು ಬಿಸಿ ರೋಡ್ ನಿಂದ ಮಂಗಳೂರಿಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.